ತೆಕ್ಕಲಕೋಟೆ: ಸಮೀಪದ ಮಣ್ಣೂರು ಸೂಗೂರು ಗ್ರಾಮದಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಬೇರೊಬ್ಬರ ಹೆಸರಿಗೆ ಪಹಣಿ ಬದಲಿಸಿದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

2 ಎಕರೆ ಜಮೀನನ್ನು ಗ್ರಾಮ ಆಡಳಿತಾಧಿಕಾರಿ ಹಾಗೂ ತೆಕ್ಕಲಕೋಟೆಯ ಕಂದಾಯ ನಿರೀಕ್ಷಕ ಸೇರಿ ಪಹಣಿ ತಿದ್ದುಪಡಿ ಮಾಡಿದ್ದಾರೆ ಎಂದು ವಿಜಯಲಕ್ಷ್ಮಿ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತುಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಡಿಗೆ ಕಾರು ಮಾರಾಟ: ದೂರು ದಾಖಲು

ಬಳ್ಳಾರಿ: ಕಾರುಗಳನ್ನು ಬಾಡಿಗೆ ಪಡೆದುಕೊಂಡು ಬೇರೆ ಊರುಗಳಲ್ಲಿ, ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರದ ಬಸವನಕುಂಟೆಯ ಜಾಹಿದ್ ಬಾಷಾ ವಿರುದ್ಧ ಬ್ರೂಸ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಳ್ಳಾರಿಯ 50-60 ಜನರಿಂದ ಕಾರು ಬಾಡಿ ಪಡೆದ ಜಾಹಿದ್, ಸಿಂಧನೂರು, ರಾಯಚೂರಿನಲ್ಲಿ ಅಡಮಾನ ಹಾಗೂ ಮಾರಾಟ ಮಾಡಿದ್ದಾನೆ ಎಂದು ಸೈಯ್ಯದ್ ಸದ್ರು ದೂರಿನಲ್ಲಿ ತಿಳಿಸಿದ್ದಾರೆ.

ಬಿಸಿಯೂಟ ಸಾಮಗ್ರಿ ಕಳವು: ಪ್ರಕರಣ ದಾಖಲು

ತೆಕ್ಕಲಕೋಟೆ: ಸಮೀಪದ ಶಾನವಾಸಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಹಾರ ಸಾಮಗ್ರಿ ಹಾಗೂ ಇನ್ವರ್ಟರ್ ಕಳವಾಗಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ದೂರು ನೀಡಿದ್ದಾರೆ.

₹15 ಸಾವಿರ ಮೌಲ್ಯದ ಇನ್ವರ್ಟರ್ ಬ್ಯಾಟರಿ ಹಾಗೂ ಒಟ್ಟು ₹24,900 ಮೌಲ್ಯದ ಆಹಾರ ಸಾಮಗ್ರಿಗಳು ಕಳವಾಗಿರುವ ಕುರಿತು ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.