ಹರಪನಹಳ್ಳಿ: ಪಟ್ಟಣ ಒಳಗೊಂಡು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನಡೆದಿದ್ದ ಮನೆ ಕಳವು ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ, ₹ 11.96 ಲಕ್ಷ ಮೌಲ್ಯದ ವಸ್ತುಗಳನ್ನು ಮಂಗಳವಾರ ಜಪ್ತಿ ಮಾಡಿಕೊಳ್ಳಲಾಗಿದೆ.

ಹೊಸಪೇಟೆಯ ಮಣಿ, ಚಂದ್ರಶೇಖರ, ಭೀಮೇಶ್ ಹಾಗೂ ಅರಸೀಕೆರೆ ಠಾಣೆಯ ವ್ಯಾಪ್ತಿಯ ಪ್ರಕರಣದಲ್ಲಿ ದಾವಣಗೆರೆ ಕಾಡಜ್ಜಿಯ ಮುಬಾರಕ್ ಅಲಿ, ಮನೋಜ್ ಎಂಬವರನ್ನು ಬಂಧಿಸಲಾಗಿದೆ. ಕಳ್ಳತನಕ್ಕೆ ಬಳಸಿದ್ದ ಕಾರು, ನಗದು ₹ 1.40 ಲಕ್ಷ, 80 ಗ್ರಾಂ ತೂಕದ ಬಂಗಾರದ ಆಭರಣ, 80 ಗ್ರಾಂ ತೂಕದ ಬೆಳ್ಳಿಯ ಆಭರಣ, ಒಟ್ಟು ₹ 10.18 ಲಕ್ಷ ಬೆಲೆಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಅರಸೀಕೆರೆ ಠಾಣೆಯ ಪೊಲೀಸರು ಆರೋಪಿಗಳಿಂದ 17 ಗ್ರಾಂ ಚಿನ್ನ, 112 ಗ್ರಾಂ ಬೆಳ್ಳಿ ಆಭರಣ ಒಟ್ಟು ₹ 1.78 ಲಕ್ಷ ಬೆಲೆಯ ವಸ್ತುಗಳು, ಒಂದು ಡಿಯೊ ಸ್ಕೂಟಿ ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ಏ. 28ರಂದು ಅರಸೀಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಹನುಮನಹಳ್ಳಿಯ ಮನೆಯೊಂದರ ಬೀಗ ಮುರಿದು ಆಭರಣ ಕದ್ದಿದ್ದರು. ಏ. 29ರ ರಾತ್ರಿ ಚಿಗಟೇರಿ ನಜೀರ್ ನಗರದ ಕ್ರಾಸ್ನಲ್ಲಿ ಮನೆ ಬೀಗ ಮುರಿದು ಚಿನ್ನ, ಬೆಳ್ಳಿ ಆಭರಣ ಕಳವು ಮಾಡಿದ್ದರು ಎಂದು ಡಿವೈಎಸ್ಪಿ ವೆಂಕಟಪ್ಪ ನಾಯಕ ವಿವರಿಸಿದರು.

ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯ ತಂಡದಲ್ಲಿ ಸಿಪಿಐ ಮಹಾಂತೇಶ್ ಜಿ. ಸಜ್ಜನ್, ಪಿಎಸ್ಐಗಳಾದ ಶಂಭುಲಿಂಗ ಹಿರೇಮಠ, ರಂಗಯ್ಯ, ನಾಗರತ್ನ, ಸಿಬ್ಬಂದಿ ಮುಬಾರಕ್, ರವಿ ದಾದಾಪುರ, ಮಾಲತೇಶ ಬಿಳಿಚೋಡು, ಆನಂದ, ನಾಗರಾಜ, ವೀರಯ್ಯ, ನಟರಾಜ, ದಾದಾಪೀರ್, ಗುರುರಾಜ, ಹರೀಶ್, ಕುಮಾರನಾಯ್ಕ, ಕೊಟ್ರೇಶ್ ಇದ್ದರು.

ಸಿಬ್ಬಂದಿ ಕಾರ್ಯವನ್ನು ಎಸ್ಪಿ ಶ್ರೀಹರಿಬಾಬು, ಹೆಚ್ಚುವರಿ ಎಸ್ಪಿ ಸಲೀಂ ಪಾಷಾ, ಡಿವೈಎಸ್ಪಿ ವೆಂಕಟಪ್ಪ ನಾಯಕ ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.