ಹೊಸಪೇಟೆ: ಎರಡು ದಿನಗಳಲ್ಲಿ ಇಲ್ಲಿನ ತುಂಗಭದ್ರಾ ಜಲಾಶಯಕ್ಕೆ ಎರಡು ಟಿ.ಎಂ.ಸಿಗೂ ಅಧಿಕ ನೀರು ಹರಿದು ಬಂದಿದೆ.

ಜು.8ರಂದು ಜಲಾಶಯದಲ್ಲಿ 1.79 ಟಿ.ಎಂ.ಸಿ. ಅಡಿಯಷ್ಟು ನೀರಿನ ಸಂಗ್ರಹವಿತ್ತು. ಜು. 9ಕ್ಕೆ ಅದು 3.06 ಟಿ.ಎಂ.ಸಿಗೆ ಏರಿಕೆಯಾಗಿತ್ತು. ಬುಧವಾರ (ಜು.10) 4.15 ಟಿ.ಎಂ.ಸಿಗೆ ಹೆಚ್ಚಾಗಿದೆ. ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ 46.16 ಟಿ.ಎಂ.ಸಿ ನೀರಿನ ಸಂಗ್ರಹ ಇತ್ತು.

ಮಂಗಳವಾರ 14,911 ಕ್ಯುಸೆಕ್ ಇದ್ದ ಒಳಹರಿವು ಬುಧವಾರ ಸ್ವಲ್ಪ ತಗ್ಗಿದೆ. ಸದ್ಯ 12,875 ಕ್ಯುಸೆಕ್ ಒಳಹರಿವು ಇದೆ. ದಿನೇ ದಿನೇ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಾಗುತ್ತಿರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಂತಸ ಮೂಡಿಸಿದೆ.

ಸಮರ್ಪಕವಾಗಿ ಮಳೆಯಾಗದ ಕಾರಣ ಮಳೆಯಾಶ್ರಿತ ರೈತರು ಚಿಂತೆಗೀಡಾಗಿದ್ದಾರೆ. ಈಗಲೂ ಅನೇಕ ಭಾಗಗಳಲ್ಲಿ ಬಿತ್ತನೆಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.