ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನೇರುಘಟ್ಟ ದಸರಾ ಮಹೋತ್ಸವ: ಆನೆ ಸಾಗಿಸುತ್ತಿದ್ದ ಲಾರಿ ಅಪಘಾತ, ಚಾಲಕ ಸಾವು

Published 25 ಅಕ್ಟೋಬರ್ 2023, 16:05 IST
Last Updated 25 ಅಕ್ಟೋಬರ್ 2023, 16:05 IST
ಅಕ್ಷರ ಗಾತ್ರ

ಆನೇಕಲ್: ಬನ್ನೇರುಘಟ್ಟ ದಸರಾ ಮಹೋತ್ಸವಕ್ಕೆ ತರಲಾಗಿದ್ದ ಆನೆಯನ್ನು ವಾಪಸ್‌ ತಮಿಳುನಾಡಿಗೆ ಕೊಂಡೊಯ್ಯುವಾಗ ಮಾರ್ಗ ಮಧ್ಯೆ ಅಪಘಾತ ಸಂಭವಿಸಿ ಚಾಲಕ ಮೃತಪಟ್ಟಿರುವ ಘಟನೆ ತಮಿಳುನಾಡು ಹೊಸೂರಿನ ಶಾನಮಾವು ಬಳಿ ಬುಧವಾರ ನಡೆದಿದೆ.

ಲಾರಿ ಚಾಲಕ ಅಂಥೋಣಿಸ್ವಾಮಿ (45) ಮೃತರು. ದಸರಾ ಉತ್ಸವಕ್ಕೆ ತಮಿಳುನಾಡಿನ ತಿರುಚಿಯಿಂದ ಆನೆಯನ್ನು ತರಲಾಗಿತ್ತು. ಉತ್ಸವ ಮುಗಿಸಿ ವಾಪಸ್‌ ಕೊಂಡೊಯ್ಯತ್ತಿದ್ದಾಗ ಶಾನಮಾವು ಅರಣ್ಯ ಪ್ರದೇಶದಲ್ಲಿ ಚಾಲಕ ಅಂಥೋಣಿಸ್ವಾಮಿ ರಸ್ತೆ ಬದಿಗೆ ಲಾರಿ ನಿಲ್ಲಿಸಿ ಅದರ ಮುಂದೆಯೇ ಮೂತ್ರ ವಿಸರ್ಜನೆಗೆ ನಿಂತಿದ್ದರು. ಹ್ಯಾಂಡ್‌ ಬ್ರೇಕ್‌ ಹಾಕದ ಕಾರಣ ಲಾರಿಯು ದಿಢೀರನೇ ಮುಂದೆಗೆ ಚಲಿಸಿದೆ. ಲಾರಿನಡಿಗೆ ಸಿಲುಕಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆನೆಯನ್ನು ಕ್ರೇನ್‌ ಮೂಲಕ ಸಂರಕ್ಷಿಸಲಾಯಿತು.

ಘಟನೆಯಿಂದಾಗಿ ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ತಾಸಿಗೂ ಹೆಚ್ಚು ಕಾಲ ರಸ್ತೆ ಸಂಚಾರ ಅಸ್ತವ್ಯಸ್ಥವಾಗಿತ್ತು ಎಂದು ಹೊಸೂರು ಪೊಲೀಸರು ತಿಳಿಸಿದ್ದಾರೆ.

ಆನೇಕಲ್‌ಗೆ ಸಮೀಪದ ಹೊಸೂರಿನ ಶಾನಮಾವು ಅರಣ್ಯ ಪ್ರದೇಶದಲ್ಲಿ ದಸರಾ ಆನೆ ಕೊಂಡೊಯ್ಯುತ್ತಿದ್ದ ಲಾರಿ ಹಳ್ಳಕ್ಕೆ ಹರಿದಿದ್ದರಿಂದ ಆನೆಯನ್ನು ಕ್ರೇನ್ ಮೂಲಕ ಸಂರಕ್ಷಿಸಲಾಯಿತು

ಆನೇಕಲ್‌ಗೆ ಸಮೀಪದ ಹೊಸೂರಿನ ಶಾನಮಾವು ಅರಣ್ಯ ಪ್ರದೇಶದಲ್ಲಿ ದಸರಾ ಆನೆ ಕೊಂಡೊಯ್ಯುತ್ತಿದ್ದ ಲಾರಿ ಹಳ್ಳಕ್ಕೆ ಹರಿದಿದ್ದರಿಂದ ಆನೆಯನ್ನು ಕ್ರೇನ್ ಮೂಲಕ ಸಂರಕ್ಷಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT