ಶನಿವಾರ, ಡಿಸೆಂಬರ್ 7, 2019
16 °C

ದೊಡ್ಡಬಳ್ಳಾಪುರ | ಸ್ಕೂಟರ್-ಲಾರಿಗಳ ನಡುವೆ ಅಪಘಾತ: ನಾಲ್ವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ತುಮಕೂರು-ದೊಡ್ಡಬಳ್ಳಾಪುರ ರಸ್ತೆಯ ಮೇಷ್ಟ್ರುಮನೆ ಕ್ರಾಸ್ ಸಮೀಪ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಸ್ಕೂಟರ್ ಮತ್ತು ಲಾರಿಗಳ ನಡುವೆ ನಡೆದ ಸರಣಿ ಅಪಘಾತದಲ್ಲಿ ಸ್ಥಳದಲ್ಲೇ ನಾಲ್ಕು ಮಂದಿ ಬೈಕ್ ಸವಾರರು ಮೃತಪಟ್ಠಿದ್ದಾರೆ.

ಮೃತರನ್ನು ತಾಲ್ಲೂಕಿನ ಗಡ್ಡಂಬಚ್ಚಹಳ್ಳಿ ಗ್ರಾಮದ ಸತೀಶ್ (60), ಶಾಂತಮ್ಮ(50), ಅಜ್ಜನಕಟ್ಟೆ ಗ್ರಾಮದ ನರಸಿಂಹಮೂರ್ತಿ(35), ಮಂಜುನಾಥ್(30) ಎಂದು ಗುರುತಿಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸ್ಕೂಟರ್‌ಗಳು ದೊಡ್ಡಬಳ್ಳಾಪುರ ಕಡೆಯಿಂದ ತುಮಕೂರು ಕಡೆಗೆ ಚಲಿಸುತ್ತಿದ್ದವು. ಲಾರಿ ತುಮಕೂರು ಕಡೆಯಿಂದ ಬರುತ್ತಿತ್ತು.

ಸಾವಿನಲ್ಲೂ ಒಂದಾದ ತಂದೆ- ಮಗ,ಸೊಸೆ

ಭಾನುವಾರ ಮಧ್ಯಾಹ್ನ ದಾಬಸ್‌ಪೇಟೆ-ದೊಡ್ಡಬಳ್ಳಾಪುರ ರಸ್ತೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಸತೀಶ್‌ (60) ಅವರ ತಂದೆ ಚಿಕ್ಕಬಚ್ಚೇಗೌಡ (95) ಅವರು ಭಾನುವಾರ ರಾತ್ರಿ ನಿಧನ ಹೊಂದಿದ್ದಾರೆ.

ಸುಮಾರು ಮೂರು ತಿಂಗಳಿಂದ ಅನಾರೋಗ್ಯದಿಂದ ಬಳಲುತಿದ್ದ ಚಿಕ್ಕಬಚ್ಚೇಗೌಡರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಸಾವಿನಲ್ಲೂ ಸಹ ತಂದೆ ಮಗ ಒಂದಾಗಿದ್ದಾರೆ. ಮೃತರಿಗೆ ಭಾನುವಾರ ನಿಧನ ಹೊಂದಿರುವ ಸತೀಶ್‌ ಸೇರಿದಂತೆ 4 ಜನ ಪುತ್ರರು, ಮೂರು ಜನ ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆ ಮಗ, ಸೊಸೆಯೊಂದಿಗೆ ಮಂಗಳವಾರ ಗಡ್ಡಂಬಚ್ಚಹಳ್ಳಿಯಲ್ಲಿ ಗ್ರಾಮದಲ್ಲೇ ನಡೆಯಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು