ಆನೇಕಲ್: ಆನೇಕಲ್ ತಾಲ್ಲೂಕಿನಲ್ಲಿ ಅಪಾರ್ಟ್ಮೆಂಟ್ಗಳು ಹೆಚ್ಚಿರುವುದರಿಂದ ಹಾಗೂ ಖಾಸಗಿ ವಲಯದಲ್ಲಿ ಕಾರ್ಯನಿರ್ವಹಿಸುವವರ ಸಂಖ್ಯೆ ಹೆಚ್ಚಿರುವುದರಿಂದ ಸಮೀಕ್ಷೆದಾರರು ಎರಡು ಮೂರು ಬಾರಿ ಸಮೀಕ್ಷೆಗಾಗಿ ಹೋಗಬೇಕಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನಲ್ಲಿ ಐದು ಕೈಗಾರಿಕ ಪ್ರದೇಶಗಳಿವೆ. ತಾಲ್ಲೂಕಿನ ಅತ್ತಿಬೆಲೆ, ಸರ್ಜಾಪುರ ಹೋಬಳಿಯಲ್ಲಿ ಅಪಾರ್ಟ್ಮೆಂಟ್ಗಳ ಸಂಖ್ಯೆ ಹೆಚ್ಚಿದೆ. ಆನೇಕಲ್ ಯೋಜನಾ ಪ್ರಾಧಿಕಾರದ ಅನುಮತಿಯಿಂದ ನಿರ್ಮಿಸಿರುವ 173 ವಸತಿ ಸಮುಚ್ಛಯಗಳಿವೆ. ಬಹುತೇಕ ಮನೆಗಳಲ್ಲಿ ಹಿರಿಯ ನಾಗಕರಿಕರು, ಮಹಿಳೆಯರಿದ್ದಾರೆ. ಹಾಗಾಗಿ ನಿಖರ ಮಾಹಿತಿ ನೀಡಲು ಹಿಂಜರಿಯುತ್ತಿದ್ದಾರೆ. ಕುಟುಂಬದ ಮಾಹಿತಿ ತಿಳಿದಿರುವ ವ್ಯಕ್ತಿಯು ಕೆಲಸಕ್ಕೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಸಮೀಕ್ಷಕರು ಈ ಮನೆಗಳಿಗೆ ಎರಡು ಮೂರು ಬಾರಿ ಭೇಟಿ ನೀಡಬೇಕಾದ ಸ್ಥಿತಿಯಾಗಿದೆ.

ತಾಲ್ಲೂಕಿನ ಅಂದಾಜು 3.9ಲಕ್ಷ ಮನೆಗಳ ಪೈಕಿ 40 ಸಾವಿರ ವಾಣಿಜ್ಯ ಕಟ್ಟಡಗಳಿವೆ. ತಾಲ್ಲೂಕಿನಾದ್ಯಂತ 173 ಅಪಾರ್ಟ್ಮೆಂಟ್ಗಳಿವೆ. ಈ ಅಪಾರ್ಟ್ಮೆಂಟ್ಗಳಲ್ಲಿ ಶೇ.30 ಮನೆಗಳಲ್ಲಿ ಯಾರು ವಾಸವಾಗಿಲ್ಲ, ಖರೀದಿಸಿ ಖಾಲಿ ಬಿಟ್ಟಿದ್ದಾರೆ. ಉಳಿದ ಶೇ 70ರಷ್ಟು ಮನೆಗಳಲ್ಲಿ ಸಮೀಕ್ಷೆ ನಡೆಸಲು ಅಪಾರ್ಟ್ಮೆಂಟ್ಗಳಲ್ಲಿಯೇ ನಡೆಸಲು ಶಿಬಿರ ಹಮ್ಮಿಕೊಳ್ಳಲಾಗಿದೆ. ಸ್ವಯಂ ಪ್ರೇರಿತವಾಗಿ ಮಾಹಿತಿಗಳನ್ನು ನಮೂದಿಸಲು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಹಶೀಲ್ದಾರ್ ಶಶಿಧರ್ ಮಾಡ್ಯಾಳ್ ತಿಳಿಸಿದರು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತಾಲ್ಲೂಕಿನಲ್ಲಿ 3.9ಲಕ್ಷ ಮನೆಗಳ ಸಮೀಕ್ಷೆ ನಡೆಸಬೇಕಿದ್ದು, ಈ ಪೈಕಿ 98,500 ಮನೆಗಳ ಸಮೀಕ್ಷೆ ನಡೆಸಲಾಗಿದೆ. ತಾಲ್ಲೂಕಿನಾದ್ಯಂತ 2ಸಾವಿರ ಮಂದಿ ಸ್ವಯಂ ಸಮೀಕ್ಷೆಯಲ್ಲಿ ತಮ್ಮ ದಾಖಲೆಗಳನ್ನು ತಾವೇ ಸಮೂದಿಸಿದ್ದಾರೆ.

ಸ್ವಯಂ ಸಮೀಕ್ಷೆ ಜಾಗೃತಿ : ಸರ್ಕಾರ ಸೂಚಿಸಿರುವ ವೆಬ್ಸೈಟ್ಗಳಲ್ಲಿ ಸಾರ್ವಜನಿಕರು ತಮ್ಮ ಮಾಹಿತಿಯನ್ನು ತಾವೇ ನಮೂದಿಸಬಹುದಾಗಿದೆ. ಈ ಮೂಲಕ ಸಮೀಕ್ಷೆಯನ್ನು ಪೂರ್ಣಗೊಳಿಸಬಹುದು. ಹಾಗಾಗಿ ಸಾರ್ವಜನಿಕರು ವೆಬ್ಸೈಟ್ಗಳಿಗೆ ಭೇಟಿ ನೀಡಿ ಸಮೀಕ್ಷೆ ಪೂರ್ಣಗೊಳಿಸಬೇಕು. ಅಪಾರ್ಟ್ಮೆಂಟ್ಗಳು, ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಹಂತದಲ್ಲಿ ಸ್ಥಳೀಯ ಪಂಚಾಯಿತಿಗಳು ಸ್ವಯಂ ಸಮೀಕ್ಷೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಮುಂದಿನ ವಾರದೊಳಗಾಗಿ ಸಮೀಕ್ಷೆ ಪೂರ್ಣಗೊಳಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದರು.

ಸಮೀಕ್ಷೆಗೆ ವೇಗ

ಪ್ರತಿನಿತ್ಯ 20-25 ಸಾವಿರ ಕುಟುಂಬ ಸಮೀಕ್ಷೆ ಮಾಡುವ ಗುರಿ ನೀಡಲಾಗಿದೆ. ಪ್ರತಿ ದಿನ ಸಮೀಕ್ಷಕರು 15ಸಾವಿರ ಕುಟುಂಬಗಳ ಸಮೀಕ್ಷೆ ನಡೆಸುತ್ತಿದ್ದಾರೆ. ತಾಂತ್ರಿಕ ಸಮಸ್ಯೆಗಳು ಪರಿಹಾರವಾಗಿದ್ದು ಸಮೀಕ್ಷೆಗೆ ವೇಗ ನೀಡುವಂತೆ ಸಮೀಕ್ಷಕರಿಗೆ ಸೂಚಿಸಲಾಗಿದೆ. ಸಮೀಕ್ಷೆಗಳ ಬಗ್ಗೆ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುತ್ತಿದೆ. ಸೋಮವಾರದಿಂದ ಅತಿಥಿ ಶಿಕ್ಷಕರು ಸೇರಿದಂತೆ ಮತ್ತಷ್ಟು ಸಮೀಕ್ಷಕರು ಪಾಲ್ಗೊಳ್ಳುವುದರಿಂದ ಮತ್ತಷ್ಟು ವೇಗ ದೊರೆಯಲಿದೆ. ಎಂದು ತಹಶೀಲ್ದಾರ್ ಶಶಿಧರ್ ಮಾಡ್ಯಾಳ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.