ಆನೇಕಲ್: ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರ ಕುಟುಂಬದವರ ಅನುಕೂಲಕ್ಕೆ ಕಿಟಿಕಿಯಲ್ಲಿ ಇರಿಸಿದ್ದ ಮನೆ ಕೀ ಬಳಸಿ ಮನೆಯ ಬೀಗ ತೆಗೆದು 120 ಗ್ರಾಂ ಚಿನ್ನ ಕಳ್ಳತನ ಮಾಡಲಾಗಿದೆ.

ಚಿಕ್ಕಹೊಸಹಳ್ಳಿಯ ಲೋಕೇಶ್ ಮನೆಯಲ್ಲಿ ದುಷ್ಕರ್ಮಿಗಳ ಬೆಳಗ್ಗೆ 9ರ ಸುಮಾರಿಗೆ ನುಗ್ಗಿ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ್ದಾರೆ.

ಲೊಕೇಶ್ ಮಗ್ಗದ ಕೆಲಸ ಮಾಡುತ್ತಿದ್ದು, ಇವರ ಪತ್ನಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದಾರೆ. ಕುಟುಂಬದವರಿಗೆ ತಿಳಿಯುವಂತೆ ಪ್ರತಿದಿನ ಮನೆಯ ಬಾಗಿಲ ಕೀಯನ್ನು ಕಿಟಕಿ ಸಮೀಪ ಇಡುತ್ತಿದ್ದರು. ಎಂದಿನಂತೆ ಎಲ್ಲರೂ ಕೆಲಸಕ್ಕೆ ಹೋಗಿದ್ದರು. ಕಳ್ಳರು ಕಿಟಕಿಯಲ್ಲಿಟ್ಟದ್ದ ಕೀ ತೆಗೆದುಕೊಂಡು ಬಾಗಿಲು ತೆಗೆದು ಬೀರುವಿನಲ್ಲಿದ್ದ 120 ಗ್ರಾಂ ಚಿನ್ನ ಮತ್ತು ನಗದ ಕಳವು ಮಾಡಿದ್ದಾರೆ. ಕಳವು ಬಳಿಕ ಮನೆ ಬಾಗಿಲನ್ನು ಮಚ್ಚದೆ ಹಾಗೇ ಬಿಟ್ಟಿದ್ದಾರೆ. ದಂಪತಿ ಮನೆಗೆ ಬಂದಾಗಾ ಕಳ್ಳತನ ನಡೆದಿರುವುದು ಗೊತ್ತಾಗಿದೆ.

ಆನೇಕಲ್ ಪೊಲೀಸ್ ಇನ್ಸ್ಪೆಕ್ಟರ್ ತಿಪ್ಪೇಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆನೇಕಲ್ ತಾಲ್ಲೂಕಿನ ನೆರಳೂರು ಮನೆಯೊಂದರಲ್ಲಿ ಇತ್ತೀಚಿಗೆ ಆಹ್ವಾನ ಪತ್ರಿಕೆ ನೀಡುವ ಸೋಗಿನಲ್ಲಿ ಬಂದು 200 ಗ್ರಾಂ ಚಿನ್ನವನ್ನು ಕಳವು ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.