ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ | ಮದರಸಾ ಸಂಸ್ಥೆಗಳಿಂದ ಅರ್ಜಿ ಆಹ್ವಾನ

Published 8 ಜನವರಿ 2024, 14:50 IST
Last Updated 8 ಜನವರಿ 2024, 14:50 IST
ಅಕ್ಷರ ಗಾತ್ರ

ದೇವನಹಳ್ಳಿ: ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ 2023-24ನೇ ಸಾಲಿನ ಜಿಲ್ಲೆಯಲ್ಲಿ ನೋಂದಾಯಿತ ಮದರಸಾಗಳಿಗೆ ಔಪಚಾರಿಕ ಮತ್ತು ಗಣಕೀಕೃತ ಶಿಕ್ಷಣ ನೀಡಲು ಮದರಸಾ ಸಂಸ್ಥೆಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಮದರಸಾ ಸಂಸ್ಥೆಗಳು ಆನ್‌ಲೈನ್‌ನ https://Dom.Karnataka.gov.in ಮೂಲಕ ಅರ್ಜಿ ಸಲ್ಲಿಸಿ, ಸಲ್ಲಿಸಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಜ.20 ಕೊನೆ ದಿನ. ಮದರಸಾ ಸಂಸ್ಥೆಗಳು ವಕ್ಫ್ ನೋಂದಾಯಿತ/ಇತರೆ ಸಂಘ ಸಂಸ್ಥೆ ಕಾಯ್ದೆಯಡಿ ನೋಂದಾಯಿತ ಮದರಸಾ ಸಂಸ್ಥೆಯಾಗಿರಬೇಕು. ಮದರಸಾದಲ್ಲಿ 40 ಅರ್ಹ ವಿದ್ಯಾರ್ಥಿಗಳಿರಬೇಕು. ಮದರಸಾಗಳು ತರಗತಿ ಕೊಠಡಿಗಳೊಂದಿಗೆ ವಸತಿ ಸೌಲಭ್ಯವನ್ನು ಹೊಂದಿರಬೇಕು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೊಠಡಿ ಸಂಖ್ಯೆ 216, 2ನೇ ಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ದೇವನಹಳ್ಳಿ ತಾಲ್ಲೂಕು ಇಲ್ಲಿ ಸಂಪರ್ಕಿಸಬಹುದು. (ದೂ.080 29787455)ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT