ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನೇರುಘಟ್ಟ: 13 ಪ್ರಾಣಿಗಳ ದತ್ತು

ಎರಡು ಹೆಣ್ಣು ಹುಲಿ ಮರಿ, ಎರಡು ಸಿಂಹದ ಮರಿಗಳಿಗೆ ಜನ್ಮ: ಹುಲಿಗಳ ಸಂಖ್ಯೆ 19: ಸಿಂಹಗಳ ಸಂಖ್ಯೆ 24ಕ್ಕೆ ಏರಿಕೆ
Last Updated 16 ಏಪ್ರಿಲ್ 2021, 20:15 IST
ಅಕ್ಷರ ಗಾತ್ರ

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ 2021ರಲ್ಲಿ 13 ಪ್ರಾಣಿಗಳನ್ನು ಎಂಟು ಮಂದಿ ದತ್ತು ಪಡೆದಿದ್ದಾರೆ. ₹34 ಸಾವಿರ ದೆಣಿಗೆ ನೀಡಿದ್ದಾರೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕಿ
ವನಶ್ರೀ ವಿಪಿನ್‌ ಸಿಂಗ್‌ ಮಾಹಿತಿ ನೀಡಿದ್ದಾರೆ.

ಆನೆ ವೇದಳಿಗೆ ಜನಿಸಿದ ಹೆಣ್ಣು ಮರಿ, ಜೀಬ್ರಾ ಕಾವೇರಿಗೆ ಜನಿಸಿದ ಹೆಣ್ಣು ಮರಿ, ಹಿಪೋಪೊಟಮಸ್‌
ದಶ್ಯಗಳಿಗೆ ಜನಿಸಿದ ಗಂಡು ಮರಿ, ಲಂಗೂರ್‌ ರೇಷ್ಮಿಗೆ ಜನಿಸಿರುವ ಹೆಣ್ಣು ಮರಿ, ಲಂಗೂರ್‌ ಅಧಿತಿಗೆ ಜನಿಸಿದ ಹೆಣ್ಣು ಮರಿ, ಗ್ರೇವುಲ್ಫ್‌ ಅಕಿರಾಳಿಗೆ ಜನಿಸಿರುವ ಮೂರು ಗಂಡು ಮತ್ತು ಒಂದು ಹೆಣ್ಣು ಮರಿ ಮತ್ತು ಜಿರಾಫೆ ಗೌರಿ, 5 ವರ್ಷ ವಯಸ್ಸಿನಗಂಡು ಚಿರತೆ, 4 ವರ್ಷ ವಯಸ್ಸಿನ ಹೆಣ್ಣು ಚಿರತೆ ಸೇರಿದಂತೆ ಹಲವು ಪ್ರಾಣಿಗಳು ದತ್ತು ಪಡೆಯಲು ಲಭ್ಯವಿವೆಎಂದರು.

ದತ್ತು ಪಡೆಯಲು ಆಸಕ್ತಿಯಿರುವವರು ಉದ್ಯಾನದ ಶಿಕ್ಷಣಾಧಿಕಾರಿ ಅವರನ್ನು educationbbp@gmail.com ಸಂಪರ್ಕಿಸಬಹುದು ಎಂದರು.

ಹುಲಿ ಸಂಖ್ಯೆ 19ಕ್ಕೆ: ಬನ್ನೇರುಘಟ್ಟ ಜೈವಿಕ ಉದ್ಯಾನದ ಹುಲಿ ಅನುಷ್ಕಾಳು ಫೆ.12ರಂದು ಎರಡು ಹೆಣ್ಣು ಮರಿಗಳಿಗೆ ಜನ್ಮನೀಡಿದ್ದಾಳೆ. ಮರಿಗಳು ಆರೋಗ್ಯವಾಗಿದ್ದು ತಾಯಿಯೊಂದಿಗೆ ಸಂತಸದಿಂದಿವೆ. ಇದರಿಂದ ಜೈವಿಕ ಉದ್ಯಾನದಲ್ಲಿ ಹುಲಿ ಸಂಖ್ಯೆ19ಕ್ಕೇರಿದೆ

ಉದ್ಯಾನದ ಸಿಂಹಿಣಿ ಸನಾ ಜ.15ರಂದು ಎರಡು ಹೆಣ್ಣು ಮರಿಗಳಿಗೆ ಜನ್ಮ ನೀಡಿದ್ದು ತಾಯಿ ಮತ್ತು ಮರಿ ಆರೋಗ್ಯವಾಗಿವೆ. ಸಿಂಹಗಳ ಸಂಖ್ಯೆ 24ಕ್ಕೇರಿದೆ.ಈ ಮರಿಗಳಿಗೆ ನಾಮಕರಣ ಮಾಡಿಲ್ಲ. ದತ್ತು ತೆಗೆದುಕೊಳ್ಳಲು ದಾನಿಗಳುಇಷ್ಟಪಟ್ಟಲ್ಲಿ ಅವರು ಸೂಚಿಸುವ ಹೆಸರಿಟ್ಟು ದತ್ತು ತೆಗೆದುಕೊಳ್ಳಲು ಅವಕಾಶವಿದೆ ಎಂದು ಉದ್ಯಾನದ ಅಧಿಕಾರಿಗಳುತಿಳಿಸಿದ್ದಾರೆ.

ಆರೈಕೆ ಅಗತ್ಯ: ‘ಮರಿಗಳು ಹುಟ್ಟಿದಾಗ ಅತ್ಯಂತ ಸೂಕ್ಷ್ಮವಾಗಿ ಅವುಗಳನ್ನು ನೋಡಿಕೊಳ್ಳಬೇಕು. ಹಾಗಾಗಿ ಹುಟ್ಟಿದ ತಕ್ಷಣ ಹುಲಿ ಮತ್ತು ಸಿಂಹದ ಮರಿಗಳು ಸಾರ್ವಜನಿಕ ವೀಕ್ಷಣೆಗೆ ಲಭ್ಯವಿರುವುದಿಲ್ಲ. ಹೆಚ್ಚು ಜತನದಿಂದ ನೋಡಿಕೊಳ್ಳಬೇಕು. ಹಾಗಾಗಿ ಮರಿಗಳ ವೀಕ್ಷಣೆಗೆ ಬಿಟ್ಟಿರಲಿಲ್ಲ. ಹುಲಿ ಮತ್ತು ಸಿಂಹದ
ಮರಿಗಳನ್ನು ಮಗುವಿನಂತೆ ನೋಡಿಕೊಳ್ಳಲಾಗಿದೆ. ಸ್ಥಳೀಯ ಮೇಕೆ ಮರಿಗಳ ಹಾಲು ಮತ್ತು
ಪೌಷ್ಟಿಕಾಂಶ ಟಾನೀಕ್‌ಗಳನ್ನು ಪ್ರಾಣಿ ಪಾಲಕರು ನೀಡುವ ಮೂಲಕ ಮರಿಗಳನ್ನು ಸಾಕಿದ್ದಾರೆ. ಬೆಳಗಿನ ಪಾಳಿಯಲ್ಲಿ ಸಾವಿತ್ರಮ್ಮ ಮತ್ತು ರಾತ್ರಿ ಪಾಳಿಯಲ್ಲಿ ಶಿವಕುಮಾರ್‌ ಮರಿಗಳನ್ನು ಜೋಪಾನ
ಮಾಡಿದ್ದಾರೆ. ಮರಿಗಳು ಆರೋಗ್ಯವಾಗಿವೆ’ ಎಂದು ಉದ್ಯಾನದ ವೈದ್ಯ ಡಾ.ಉಮಾಶಂಕರ್‌
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT