ಸಫಾರಿ ವಾಹನದ ಮೇಲೆ ಹುಲಿ ದಾಳಿ: ದೃಶ್ಯ ವೈರಲ್

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹುಲಿಯೊಂದು ಸಫಾರಿ ವಾಹನದ ಮೇಲೆ ದಾಳಿ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೈವಿಕ ಉದ್ಯಾನದ ಹುಲಿಧಾಮಕ್ಕೆ ಸಫಾರಿ ವಾಹನ ತೆರಳಿದ ಸಂದರ್ಭದಲ್ಲಿ ಸಫಾರಿಯಲ್ಲಿನ ಬೆಂಗಾಲ್ ಟೈಗರ್ ವಾಹನದೆಡೆಗೆ ಜಿಗಿದು ಬಂಪರ್‌ನ್ನು ಕೀಳುವ ಪ್ರಯತ್ನ ನಡೆಸಿದೆ.
ಇದರಿಂದಾಗಿ ವಾಹನದಲ್ಲಿದ್ದ ಪ್ರವಾಸಿಗರು ಭಯಗೊಂಡಿದ್ದಾರೆ. ಕೆಲಕಾಲ ಆತಂಕ ಉಂಟಾಗಿತ್ತು. ಜೀಪಿನ ಹಿಂಭಾಗದ ಬಂಪರ್‌ನ್ನು ಕಚ್ಚಿ ಕಿತ್ತುಹಾಕುವ ಪ್ರಯತ್ನ ಮಾಡಿತು.
ಮತ್ತೊಂದು ಸಫಾರಿ ವಾಹನದಲ್ಲಿದ್ದ ಪ್ರವಾಸಿಗರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ಕೆಲವೊಮ್ಮೆ ಹುಲಿಗಳು ಕೋಪಗೊಂಡಾಗ ಈ ರೀತಿ ವರ್ತಿಸುತ್ತವೆ ಎಂದು ಉದ್ಯಾನದ ಮೂಲಗಳು ತಿಳಿಸಿವೆ.
ಈ ದೃಶ್ಯ ಕೆಲ ತಿಂಗಳುಗಳ ಹಿಂದೆ ನಡೆದಿದೆ ಎಂದು ಹೇಳಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.