ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕಯೊಬ್ಬರಿಗೆ ಕಿರುಕುಳ ನೀಡಿದ ಕ್ಯಾಬ್ ಚಾಲಕನ ವಿರುದ್ಧ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚುವರಿ ಹಣ ಪಡೆದು, ಲಗೇಜ್ ನೀಡದೆ ತೊಂದರೆ ನೀಡಿರುವುದಾಗಿ ಆರೋಪಿಸಿ ಮಹಿಳೆ ದೂರು ನೀಡಿದ್ದರು.

ಸರ್ಜಾಪುರ ನಿವಾಸಿ ಪ್ರಿಯಾಂಷಿ ಆ್ಯಪ್ ಮೂಲಕ ಕ್ಯಾಬ್ ಬುಕ್ ಮಾಡಿ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಆ್ಯಪ್ನಲ್ಲಿ ಪ್ರಯಾಣ ದರ ₹982 ತೋರಿಸಿದ್ದರೂ, ವಿಮಾನ ನಿಲ್ದಾಣ ತಲುಪಿದ ಬಳಿಕ ಚಾಲಕ ₹1,448 ನೀಡುವಂತೆ ಒತ್ತಾಯಿಸಿದ್ದಾನೆ. ಹೆಚ್ಚುವರಿ ಹಣ ನೀಡದಿದ್ದರೆ ಲಗೇಜ್ ವಾಪಸ್ ನೀಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರಿಂದ ಆತಂಕಕ್ಕೊಳಗಾದ ಮಹಿಳೆ ಬೇಡಿಕೆಯಷ್ಟು ಮೊತ್ತ ಪಾವತಿಸಿದ್ದಾರೆ.

ಈ ಸಂಬಂಧ ಸಂತ್ರಸ್ತೆ ಕರ್ನಾಟಕ ಪೊಲೀಸ್ ಆ್ಯಪ್ ಮೂಲಕ ದೂರು ದಾಖಲಿಸಿದ್ದರು. ದೂರಿನ ಅಧಾರದ ಮೇಲೆ ಸ್ಥಳಕ್ಕೆ ಧಾವಿಸಿದ ಹೊಯ್ಸಳ ಸಿಬ್ಬಂದಿ, ಹೆಚ್ಚುವರಿಯಾಗಿ ವಸೂಲಿ ಮಾಡಿದ್ದ ಹಣವನ್ನು ವಾಪಸ್ ನೀಡುವಂತೆ ಚಾಲಕನಿಗೆ ಸೂಚಿಸಿದ್ದಾರೆ. ಆದರೆ, ಚಾಲಕ ಪೊಲೀಸರ ಮಾತು ಕೇಳದೆ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ. ಪೊಲೀಸರನ್ನು ಎಳೆದಾಡಿ ದೈಹಿಕ ತೊಂದರೆ ನೀಡಿದ್ದಾರೆ ಎಂದು ಎಎಸ್ಐ ದೂರಿನಲ್ಲಿ ತಿಳಿಸಿದ್ದಾರೆ.

ಚಾಲಕನ ವಿರುದ್ಧ ವಿಮಾನ ನಿಲ್ದಾಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.

ದೇವನಹಳ್ಳಿ: ಇಲ್ಲಿನ ವಿಮಾನ ನಿಲ್ದಾಣಕ್ಕೆ ಸರ್ಜಾಪುರದಿಂದ ಬಂದ ಮಹಿಳಾ ಪ್ರಯಾಣಿಕೆಯಿಂದ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟು, ಲಗೇಜ್ ನೀಡಲು ಅಡ್ಡಿಪಡಿಸಿದ ಕ್ಯಾಬ್ ಚಾಲಕನ ವಿರುದ್ಧ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕ ಪೊಲೀಸ್ ಆಪ್ ಮೂಲಕ ಸಂತ್ರಸ್ತೆ ದೂರು ನೀಡಿದ ಹಿನ್ನೆಲೆಯಲ್ಲಿ, ಸ್ಥಳಕ್ಕೆ ತೆರಳಿದ ಹೊಯ್ಸಳ ಸಿಬ್ಬಂದಿಯ ಮೇಲೂ ಚಾಲಕ ನಿಂದನೀಯ ಪದಗಳಿಂದ ಮಾತನಾಡಿ, ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾನೆ ಎಂಬ ಆರೋಪವಿದೆ.

ಪ್ರಿಯಾಂಷಿ ಎಂಬ ಮಹಿಳೆ ಸರ್ಜಾಪುರದಿಂದ ಕೆಐಎಗೆ ರ್ಯಾಪಿಡೋ ಆಪ್ ಮೂಲಕ ವಾಹನ ಬುಕ್ ಮಾಡಿದ್ದರು. ಆಪ್ನಲ್ಲಿ ಪ್ರಯಾಣದ ದರ ₹982 ಎಂದು ತೋರಿಸಿತ್ತು. ಆದರೆ ವಿಮಾನ ನಿಲ್ದಾಣಕ್ಕೆ ಬಂದ ನಂತರ ಚಾಲಕ ₹1,448 ನೀಡುವಂತೆ ಒತ್ತಾಯಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಣ ನೀಡದಿದ್ದರೆ ಲಗೇಜ್ ಕೊಡಲ್ಲ ಎಂದು ಬೆದರಿಕೆ ಹಾಕಿದ ಕಾರಣ, ಅವರು ಬೇಡಿಕೆಯಂತೆ ₹1,448 ನೀಡಿದ್ದಾರೆ ಎಂದು ಹೇಳಿದ್ದಾರೆ.

ದೂರು ಬಂದ ಬಳಿಕ ಸ್ಥಳಕ್ಕೆ ಹೋದ ಪೊಲೀಸರು ಹೆಚ್ಚುವರಿ ಪಡೆದ ಹಣವನ್ನು ಹಿಂತಿರುಗಿಸುವಂತೆ ಸೂಚಿಸಿದರು. ಈ ವೇಳೆ ಚಾಲಕ ಪೊಲೀಸರನ್ನು ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿ ಕೈಗಳಿಂದ ಎಳೆದಾಡಿ ತೊಂದರೆ ನೀಡಿದ್ದಾನೆ ಎಂದು ಎಎಸ್ಐ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಈ ಸಂಬಂಧ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.