ಸರ್ಕಾರ ಪಟಾಕಿ ತಯಾರಿಸುವ ಕಂಪನಿ ನಿಷೇಧಿಸುವುದನ್ನು ಬಿಟ್ಟು ಸುರಕ್ಷತಾ ಕ್ರಮ, ಹಸಿರು ಪಟಾಕಿ ಮಾತ್ರ ಬಳಿಸಿ ಎಂದು ಸೂಚಿಸಿದರೆ ಹೇಗೆ ?. ತಾಲ್ಲೂಕಿನಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಕಾರ್ಯಕ್ರಮ ನಡೆಯುತ್ತಲೇ ಇರುತ್ತೆ. ಆ ಸಂದರ್ಭದಲ್ಲಿ ಪಾಟಕಿ ಸಿಡಿಸುವುದೇ ಪದ್ಧತಿಯಾಗಿದೆ. ಇದರಿಂದ ತಾಲ್ಲೂಕಿಗೆ ಸಾವಿರಾರು ಮೈಲಿಗಳ ದೂರದಿಂದ ಬರುತ್ತಿದ್ದ ವಲಸೆ ಹಕ್ಕಿಗಳ ಸಂಖ್ಯೆ ಕಡಿಮೆ ಆಗುತ್ತಿದೆ.
ಬಾಲಾಜಿ ರಘೋತ್ತಮ್, ಕೆರೆ ಸಂರಕ್ಷಣಾ ಹೋರಾಟಗಾರ
ಪಟಾಕಿ ತಯಾರಿಕಾ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಚರ್ಮ ಮತ್ತು ಕಣ್ಣು ಸಂಬಂಧಿ ಕಾಯಿಲೆ ಸಾಮಾನ್ಯವಾಗಿ ಬರುತ್ತದೆ. ಅಂತಹದ್ದರಲ್ಲಿ ರಾಸಾಯನಿಕ ಮಿಶ್ರಿತ ಪಟಾಕಿ ಸಿಡಿಸುವುದರಿಂದ ಮನುಷ್ಯನ ಜೀವಕ್ಕೆ ಅಷ್ಟೇ ಅಲ್ಲ ಪ್ರಾಣಿ ಪಕ್ಷಿಗಳಿಗೂ ಮಾರಕ ಎಂಬುದು ಎಲ್ಲರಿಗೂ ತಿಳಿದಿದೆ. ಆದರೂ ಪಟಾಕಿ ಅಬ್ಬರ ತಗ್ಗಿಲ್ಲ. ಹೊಸಕೋಟೆಯ ಅಮಾನಿಕೆರೆಯಲ್ಲಿ ಒಂದರಲ್ಲೇ ಸುಮಾರು 200ಕ್ಕೂ ಹೆಚ್ಚು ಅಳಿವಿನಂಚಿನ ಪಕ್ಷಿ ಪ್ರಭೇದಗಳಿವೆ. ಸೈಬೀರಿಯಾ, ರಷ್ಯಾ ಭಾಗದಿಂದ ವಲಸೆ ಬರುವ ಪಕ್ಷಿಗಳ ಸಂತತಿಯು ಮಾರಕ ಪಟಾಕಿಗಳ ಶಬ್ದ ಮತ್ತು ರಾಸಾಯನಿಕ ಹೊಗಯಿಂದ ದಿನದಿಂದ ದಿನಕ್ಕೆ ಕ್ಷಿಸುತ್ತಿವೆ.