ಭಾನುವಾರ, ಸೆಪ್ಟೆಂಬರ್ 26, 2021
21 °C
ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ಸಭೆ

ಹಾಲು ಉತ್ಪಾದಕರಿಗೆ ನಿವ್ವಳ ಲಾಭದಲ್ಲಿ ಬೋನಸ್ ನೀಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ದೇವನಹಳ್ಳಿ: ಹಾಲು ಉತ್ಪಾದಕರ ಸಹಕಾರ ಸಂಘ ಗಳಿಸಿರುವ ನಿವ್ವಳ ಲಾಭದಲ್ಲಿ ಹಾಲು ಉತ್ಪಾದಕರಿಗೆ ಶೇ100ಕ್ಕೆ ₹4.06 ಬೋನಸ್ ನೀಡಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಜಿ.ಕೃಷ್ಣಪ್ಪ ತಿಳಿಸಿದರು.

ತಾಲ್ಲೂಕಿನ ಉಗನವಾಡಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದ 2017–18ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಸಂಘದಲ್ಲಿ 210 ಸದಸ್ಯರಿದ್ದು ಈ ಪೈಕಿ 84 ಮಹಿಳಾ ಸದಸ್ಯರಿರುವುದು ಹೆಗ್ಗಳಿಕೆ. 41 ಪರಿಶಿಷ್ಟ ಜಾತಿ, 2 ಪರಿಶಿಷ್ಟ ಪಂಗಡದ ಸದಸ್ಯರಿದ್ದಾರೆ ಎಂದರು.

ಪ್ರಸ್ತುತ 62 ಸದಸ್ಯರು ದಿನದ ಸರಾಸರಿ 620 ಲೀಟರ್ ಹಾಲು ಸಂಘಕ್ಕೆ ಪೂರೈಕೆ ಮಾಡುತ್ತಿದ್ದು ವಾರ್ಷಿಕ 61.87 ಲಕ್ಷ ಬಟವಾಡೆ ಮಾಡಲಾಗಿದೆ. ಈ ಸಾಲಿನಿಂದ ಒಂದು ಸಾವಿರ ಲೀಟರ್ ಹಾಲು ಶೇಖರಣೆ ಗುರಿ ಇಟ್ಟುಕೊಳ್ಳಲಾಗಿದೆ. ಹಾಲಿನ ವ್ಯಾಪಾರ ಲಾಭ ಇತರೆ ಆದಾಯಗಳಿಂದ ಒಟ್ಟು ₹10.41 ಲಕ್ಷ ಲಾಭ ಗಳಿಸಿದೆ. ಹಾಲಿನ ಜಿಡ್ಡಿನ ಪರೀಕ್ಷೆಗೆ ಅನುಗುಣವಾಗಿ ಹಾಲಿನ ದರ ನಿಗದಿ ಪಡಿಸಲಾಗಿದೆ. ಸದಸ್ಯರು ಗುಣಮಟ್ಟದ ಹಾಲಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.

19 ಹಾಲು ಉತ್ಪಾದಕ ಸದಸ್ಯರಿಗೆ ರಿಯಾಯಿತಿ ದರದದಲ್ಲಿ ರಾಸುಗಳ ಮ್ಯಾಟ್ ಮತ್ತು 4 ಸದಸ್ಯರಿಗೆ ತಲಾ ₹25 ಸಾವಿರ ಬೆಲೆಯ ಹಾಲು ಕರೆಯುವ ಯಂತ್ರ ನೀಡಲಾಗಿದೆ. ಸದಸ್ಯರಿಗೆ ಅವಶ್ಯ ಇದ್ದರೆ ಮತ್ತಷ್ಟು ಹಾಲು ಕರೆಯುವ ಯಂತ್ರ ನೀಡಲು ಆಡಳಿತ ಮಂಡಳಿ ಸಿದ್ಧವಿದೆ ಎಂದರು.

2018–19ನೇ ಸಾಲಿನಲ್ಲಿ ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಹಾಲು ಉತ್ಪಾದಕರಿಗೆ ಲಭ್ಯವಿರುವ ತಾಂತ್ರಿಕ ಸೌಲಭ್ಯ ಒದಗಿಸಿ ತರಬೇತಿ ನೀಡುವುದು, ಬಮೂಲ್ ವಿಮಾ ಯೋಜನೆ ಮತ್ತು ರಾಸುಗಳ ವಿಮಾ ಯೋಜನೆ ಸಂಘದ ವ್ಯಾಪ್ತಿಯಲ್ಲಿ ಪರಿಣಾಮಕಾರಿ ಜಾರಿಗೆ ತರುವುದು ಅತ್ಯಂತ ಅವಶ್ಯಕವಾಗಿದೆ ಎಂದರು.

1978–79ನೇ ಸಾಲಿನಲ್ಲಿ ಆರಂಭವಾದ ಸಹಕಾರ ಸಂಘದ ಕಟ್ಟಡ ಶಿಥಿಲಗೊಂಡಿದ್ದು ನೂತನ ಕಟ್ಟಡ ನಿರ್ಮಾಣಕ್ಕೆ ಬಮೂಲ್ ವತಿಯಿಂದ ಪ್ರೋತ್ಸಾಹಧನ ಪಡೆಯಬೇಕಾಗಿದೆ ಎಂದರು.

ದೇವನಹಳ್ಳಿ ಶಿಬಿರ ಕಚೇರಿ ವಿಸ್ತೀರ್ಣಾಧಿಕಾರಿ ಡಿ.ಕೆ.ಮಂಜುನಾಥ್ ಮಾತನಾಡಿದರು. ಸಹಕಾರ ಸಂಘ ಉಪಾಧ್ಯಕ್ಷ ನಂಜುಂಡೇಶ್ವರಮೂರ್ತಿ, ನಿರ್ದೇಶಕರಾದ ಎನ್.ಮಂಜುನಾಥ್, ಕೆ.ಆಂಜಿನಪ್ಪ, ವಿ.ಎ.ರವಿಕುಮಾರ್, ಪಿ.ವೆಂಕಟೇಶರೆಡ್ಡಿ, ಹನುಮಂತೇಗೌಡ, ಹನುಮಂತರಾಯಪ್ಪ, ಗಿರೀಶ್ ಕುಮಾರ್, ನಾಗಮ್ಮ, ನರಸಮ್ಮ, ಮುಖ್ಯ ಕಾರ್ಯ ನಿರ್ವಾಹಕ ಎನ್.ಶೇಷಗಿರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು