ಭಾನುವಾರ, ಏಪ್ರಿಲ್ 5, 2020
19 °C
ತಾಲ್ಲೂಕು ಪಂಚಾಯಿತಿ ಸದಸ್ಯರ ಅನುದಾನ: ಚಾಲನೆ

ಗ್ರಾಮಸ್ಥರಿಂದಲೇ ತಂಗುದಾಣ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ತಾಲ್ಲೂಕಿನ ಮೆಳೇಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಕ್ಕೇನಹಳ್ಳಿ, ಹೆಗ್ಗಡಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಗೂಳ್ಯ, ಮಾಚಗೊಂಡನಹಳ್ಳಿ, ಊದನಹಳ್ಳಿ ಗ್ರಾಮಗಳಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯರ ಅನುದಾನದಲ್ಲಿ ಬಸ್‌ ಪ್ರಯಾಣಿಕರ ತಂಗುದಾಣಗಳನ್ನು ಗ್ರಾಮಸ್ಥರೇ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಸದಸ್ಯ ಕಣಿವೆಪುರ ಸುನಿಲ್‍ಕುಮಾರ್, ‘ಸ್ವಾತಂತ್ರ್ಯ 7 ದಶಕಗಳು ಕಳೆದರೂ ಬಹುತೇಕ ಗ್ರಾಮಗಳು ಮೂಲಸೌಕರ್ಯಗಳಿಂದ ವಂಚಿತವಾಗಿವೆ. ಅತಿ ಕಡಿಮೆ ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ ನನ್ನ ವ್ಯಾಪ್ತಿಯ 28 ಗ್ರಾಮಗಳಿಗೂ ಪೂರಕ ಮೂಲಸೌಕರ್ಯ ಒದಗಿಸಲು ನಿರತಂತರ ಶ್ರಮಿಸುತ್ತಿದ್ದೇನೆ’ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ ವಾರ್ಷಿಕ ₹ 6 ಲಕ್ಷ ಅನುದಾನ ನೀಡುತ್ತಾರೆ. ಆದರೆ ಈ ಅನುದಾನದಲ್ಲಿ ಅಭಿವೃದ್ಧಿ ಕಷ್ಟ. ಆದರೆ ಈ ಬಾರಿ ₹ 8 ಲಕ್ಷ ಅನುದಾನವನ್ನು ಪಡೆದು ಏಕಕಾಲಕ್ಕೆ ನಾಲ್ಕು ಬಸ್ ತಂಗುದಾಣಗಳನ್ನು ನಿರ್ಮಿಸಿದ್ದೇನೆ. ಈ ಅನುದಾನದಲ್ಲಿ ನಾಲ್ಕು ಬಸ್ ಪ್ರಯಾಣಿಕರ ತಂಗುದಾಣಗಳ ನಿರ್ಮಾಣ ಹಂತದಲ್ಲಿ ಆರ್ಥಿಕ ಹೊರೆಯನ್ನು ಅನುಭವಿಸಿದ್ದು ವೈಯಕ್ತಿಕವಾಗಿ ₹ 4 ಲಕ್ಷವನ್ನು ವೆಚ್ಚ ಮಾಡಿದ್ದೇನೆ. ಹೀಗೆ ನನ್ನ ಕ್ಷೇತ್ರದ ಅಭಿವೃದ್ಧಿಗೆ ಮುಂದಿನ ದಿನಗಳಲ್ಲೂ ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.

ಮೆಳೇಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆರ್.ಚಿದಾನಂದ್ ಮಾತನಾಡಿ, ‘ತಾಲ್ಲೂಕು ಪಂಚಾಯಿತಿ ಅನುದಾನವನ್ನು ಇಂತಹದ್ದೇ ಕಾಮಗಾರಿಗಳಿಗೆ ಬಳಸಬೇಕು ಎಂಬ ನಿರ್ದೆಶನದ ನಡುವೆಯೂ ಏಕ ಕಾಲಕ್ಕೆ ನಾಲ್ಕು ತಂಗುದಾಣಗಳನ್ನು ನಿರ್ಮಾಣ ಮಾಡಿರುವುದು ಇದೆ ಪ್ರಥಮವಾಗಿದೆ ಎಂದರು.

ಈ ಸಂದರ್ಭದಲ್ಲಿ ಹೆಗ್ಗಡಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾರಾಯಣಮ್ಮ, ಮೆಳೇಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಿಂಹಮೂರ್ತಿ, ಡಿಡಿಕೆಹಳ್ಳಿ ಆಂಜಿನಪ್ಪ, ಗೂಳ್ಯ ಮುಖಂಡರಾದ ಗೋಪಾಲರೆಡ್ಡಿ, ನಾರಾಯಣಸ್ವಾಮಿ, ಹನುಮಣ್ಣ, ಬಸವೇಗೌಡ, ಹನುಮಂತೇಗೌಡ, ಗಂಗರಾಜು, ಮಾಚಗೊಂಡನಹಳ್ಳಿ ಮುಖಂಡರಾದ ಕೃಷ್ಣಪ್ಪ, ಮಂಜುನಾಥ್, ಶ್ರೀನಿವಾಸ್, ಮುನೇಗೌಡ, ಊದನಹಳ್ಳಿ ಮುಖಂಡರಾದ ಶಾಮಣ್ಣ, ಅಪ್ಪಯಣ್ಣ, ಶಶಿಧರ್ ಮುಕ್ಕೇನಹಳ್ಳಿ ಮುಖಂಡರಾದ ಕುಮಾರ್, ನಾರಾಯಣಪ್ಪ, ಕೃಷ್ಣಪ್ಪ, ಮುನಿಆಂಜಿನಪ್ಪ, ಓಬಳಪ್ಪ, ಚನ್ನಪ್ಪ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು