ದೊಡ್ಡಬಳ್ಳಾಪುರ: ‘ಹೈನುಗಾರಿಕೆ ರೈತರಿಗೆ ಆರ್ಥಿಕ ಸ್ವಾವಲಂಬನೆ ನೀಡಲಿದೆ’ ಎಂದು ಕೆಎಂಎಫ್ ನಿರ್ದೇಶಕ ಬಿ.ಸಿ. ಆನಂದ್‌ಕುಮಾರ್ ಹೇಳಿದರು.

ತಾಲ್ಲೂಕಿನ ಲಗುಮೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಕೃಷಿ ಜತೆಗೆ ಹೈನುಗಾರಿಕೆ ಕೂಡ ರೈತರ ಮುಖ್ಯ ಕಸುಬಾಗಿದೆ. ಹೈನುಗಾರಿಕೆಯಿಂದ ರೈತರು ಆರ್ಥಿಕ ಸ್ವಾವಲಂಬನೆ ಸಿಗಲಿದ್ದು ಇಡೀ ಕುಟುಂಬಕ್ಕೆ ಆರ್ಥಿಕ ಭದ್ರತೆ ತಂದುಕೊಡಲಿದೆ. ರೈತರು ಹೈನುಗಾರಿಕೆಯಲ್ಲಿ ಮತ್ತಷ್ಟು ಉತ್ಸಾಹ ತೋರಬೇಕು ಎಂದರು.

ಲಗುಮೇನಹಳ್ಳಿ ಹಾಲು ಉತ್ಪಾದಕರ ಸಂಘ ತೂಬಗೆರೆ ಹೋಬಳಿಯಲ್ಲಿಯೇ ಗುಣಮಟ್ಟದಲ್ಲಿ ಉತ್ತಮ ಹೆಸರು ಪಡೆದಿದೆ ಎಂದು ತಿಳಿಸಿದರು.

2019-20ನೇ ಸಾಲಿನಲ್ಲಿ ಶೇಕಡ 11.2ರಷ್ಟು ವ್ಯಾಪಾರ ಲಾಭ ಹೊಂದಿದೆ. ಶೇಕಡ 7.8ರಷ್ಟು ನಿವ್ವಳ ಲಾಭ ಹೊಂದಿದ್ದು ಹೋಬಳಿಗೆ ಮಾದರಿಯಾಗಿದೆ ಎಂದರು.

ಸಭೆಯಲ್ಲಿ ಬಮೂಲ್ ವಿಸ್ತರಣಾಧಿಕಾರಿ ಎಂ. ಅಶ್ವತ್ಥಪ್ಪ, ಸಂಘದ ಅಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಶಿವಶಂಕರ್ ಹಾಗೂ ಸಂಘದ ನಿರ್ದೇಶಕರು, ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.