ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಯಾಣಿಕರ ಬಟ್ಟೆಯಲ್ಲಿತ್ತು ₹1.96 ಕೋಟಿ ಮೌಲ್ಯದ 3 ಕೆ.ಜಿ ಚಿನ್ನ!

ದುಬೈನಿಂದ ಬಂದಿದ್ದ ನಾಲ್ವರ ಬಂಧನ: ಉಡುಪಿಗೆ ಚಿನ್ನದ ಪುಡಿ ಲೇಪನ
Published 18 ಮೇ 2024, 20:19 IST
Last Updated 18 ಮೇ 2024, 20:19 IST
ಅಕ್ಷರ ಗಾತ್ರ

ದೇವನಹಳ್ಳಿ: ದುಬೈನಿಂದ ಬಂದಿದ್ದ ನಾಲ್ವರು ತಮ್ಮ ಪ್ಯಾಂಟ್‌, ಟಿ–ಶರ್ಟ್‌ಗಳಲ್ಲಿ ಬಚ್ಚಿಟ್ಟುಕೊಂಡು ತಂದಿದ್ದ ₹1.96 ಕೋಟಿ ಮೌಲ್ಯದ 2.814 ಕೆ.ಜಿ ಚಿನ್ನವನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಮಹಿಳೆ ಸೇರಿದಂತೆ ನಾಲ್ವರು ಪ್ರಯಾಣಿಕರನ್ನು ಬಂಧಿಸಲಾಗಿದೆ. ಈ ವರ್ಷದಲ್ಲಿ ಇಷ್ಟು ದೊಡ್ಡ ಪ್ರಮಾಣದ ಚಿನ್ನ ಸಿಕ್ಕ ಮೊದಲ ಪ್ರಕರಣ ಇದಾಗಿದೆ ಎಂದು ಕಸ್ಟಮ್ಸ್ ಮೂಲಗಳು ತಿಳಿಸಿವೆ.

ದುಬೈನಿಂದ ಶುಕ್ರವಾರ ರಾತ್ರಿ ಬಂದಿಳಿದ ಮೂವರು ಪುರುಷರು ಮತ್ತು ಒಬ್ಬ ಮಹಿಳೆ ತಮ್ಮ ಉಡುಪಿನಲ್ಲಿ ಚಿನ್ನದ ಪುಡಿಯನ್ನು ಲೇಪಿಸಿಕೊಂಡಿರುವುದನ್ನು ಕಸ್ಟಮ್ಸ್‌ ಅಧಿಕಾರಿಗಳು ತಪಾಸಣೆ ವೇಳೆ ಪತ್ತೆ ಹಚ್ಚಿದರು.

ನಾಲ್ವರು ಪ್ರಯಾಣಿಕರು ಅಪರಾಧ ಹಿನ್ನೆಲೆ ಹೊಂದಿದ್ದರು. ಇದರಿಂದ ಅನುಮಾನಗೊಂಡ ಕಸ್ಟಮ್ಸ್‌ ಸಿಬ್ಬಂದಿ ತಪಾಸಣೆ ನಡೆಸಿದರು. ಅವರ ಅನುಮಾನ ಹುಸಿಯಾಗಲಿಲ್ಲ. ಪ್ರಯಾಣಿಕರು ಧರಿಸಿದ್ದ ಜಿನ್ಸ್ ಮತ್ತು ಟಿ–ಶರ್ಟ್‌ ಪರಿಶೀಲಿಸಿದಾಗ ಬಟ್ಟೆಗಳಿಗೆ ಒಳ ಭಾಗದಲ್ಲಿ ಚಿನ್ನವನ್ನು ಲೇಪಿಸಲಾಗಿತ್ತು. ಎಲ್ಲವನ್ನೂ ಒಟ್ಟುಗೂಡಿಸಿದಾಗ 2.814 ಕೆ.ಜಿ ಚಿನ್ನ ಸಿಕ್ಕಿದೆ. 

ಚಿನ್ನವನ್ನು ಕಳ್ಳ ಸಾಗಣೆ ಮಾಡಲು ವಿನ್ಯಾಸ ಮಾಡಲಾಗಿರುವ ವಿಶೇಷ ಉಡುಪುಗಳು
ಚಿನ್ನವನ್ನು ಕಳ್ಳ ಸಾಗಣೆ ಮಾಡಲು ವಿನ್ಯಾಸ ಮಾಡಲಾಗಿರುವ ವಿಶೇಷ ಉಡುಪುಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT