ದೇವನಹಳ್ಳಿ: ವಿಶ್ವ ವಿಖ್ಯಾತ ನಾಡ ಹಬ್ಬ ದಸರಾಗೆ ಈಗಾಗಲೇ ಚಾಲನೆ ಸಿಕ್ಕಿದೆ. ಪ್ರತಿದಿನ ವಿವಿಧ ಕಾರ್ಯಕ್ರಮ ಮೈಸೂರಿನಲ್ಲಿ ಆಯೋಜಿಸಲಾಗಿದೆ. ಈ ಬಾರಿ ವಿಜಯದಶಮಿಯಂದು ನಡೆಯುವ ಜಂಬೂ ಸವಾರಿಯಲ್ಲಿ ಜಿಲ್ಲೆಯ ಐತಿಹಾಸಿಕ ಸ್ಥಳಗಳನ್ನು ಪರಿಚಯಿಸುವ ಸ್ತಬ್ಧಚಿತ್ರ ತಯಾರಾಗುತ್ತಿದೆ.

ಸ್ತಬ್ಧ ಚಿತ್ರದಲ್ಲಿ ಕ್ರಿ.ಶ.1501ರಲ್ಲಿ ದೇವನಹಳ್ಳಿ ಭಾಗದ 20ಎಕರೆ ಪ್ರದೇಶದಲ್ಲಿ ನಿರ್ಮಾಣವಾದ ಕೋಟೆ ಮಾದರಿಯೂ ಪ್ರಮುಖ ಆಕರ್ಷಣೆ ಆಗಿದೆ. ವೃತ್ತಾಕಾರ ಹಾಗೂ ಅಂಡಾಕಾರದ ಕೊತ್ತಲು ಕಣ್ಮನ ಸೆಳೆಯಲಿದೆ.

ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣ ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟದ ಕಲಾಕೃತಿಯೂ ಇರಲಿದೆ.

ವಾಸ್ತವವಾಗಿ ಈ ಬೆಟ್ಟ ಉತ್ತರ ದಿಕ್ಕಿನಿಂದ ನೋಡಿದರೆ ಸರ್ಪದಂತೆಯೂ, ದಕ್ಷಿಣ ದಿಕ್ಕಿನಿಂದ ನೋಡಿದರೆ ಗಣೇಶನ ಆಕಾರದಿಂದಲೂ ಪೂರ್ವ ದಿಕ್ಕಿನಿಂದ ನೋಡಿದರೆ ನಂದಿ ಆಕಾರದಿಂದಲೂ ಹಾಗೂ ಪಶ್ಚಿಮ ದಿಕ್ಕಿನಿಂದ ನೋಡಿದರೆ ಅಂಗದ ಆಕಾರದಿಂದ ನೋಡಲು ಕಾಣಸಿಗುತ್ತದೆ. ಇಲ್ಲಿನ ಮಹತ್ವ ಪೂರ್ವ ಸಂಗತಿಯಾಗಿದ್ದ ಬೆಟ್ಟದ ತುದಿಯಲ್ಲಿ ಒಂದು ದೈತ್ಯ ನಂದಿ ಪ್ರತಿಮೆಯನ್ನು ಬಂಡೆಗಳಿಂದ ಕೆತ್ತಲಾಗಿದೆ.

ರಾಜ ರಾಜೇಂದ್ರ ಚೋಳರಿಂದ 910 ವರ್ಷ ಹಿಂದೆಯೇ ನಿರ್ಮಾಣವಾದ ದ್ವಾರ ಮಂಟಪ, ಸುಖನಾಸಿ, ನವರಂಗ, ಗರ್ಭ ಗೃಹಗಳಿರುವ ಬಿನ್ನಿಮಂಗಲ ಮುಕ್ತಿನಾಥೇಶ್ವರ ದೇವಾಲಯ ಸ್ತಬ್ಧ ಚಿತ್ರದಲ್ಲಿರಲಿದೆ. ಈ ದೇಗುಲದಲ್ಲಿರುವ ಶಿಲ್ಪಕಲೆಯಿಂದ ಮೂಡಿದ ತಾಂಡೇಶ್ವರ, ಗಣಪತಿ, ಶಿವವೆಂಕಟೇಶ್ವರ, ಬ್ರಹ್ಮ, ಮಹಿಷಾಸುರ ಮರ್ದಿನಿ, ಕಾಲಿಂಗ ಮರ್ದನ ಕಲಾಕೃತಿಯನ್ನೂ ಕಾಣಬಹುದಾಗಿದೆ.

ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಹೋಬಳಿ ಗಂಗರ ರಾಜಧಾನಿಯಾಗಿದ್ದ ಮಣ್ಣಿ, ನಂತರ ರಾಷ್ಟ್ರಕೂಟರ ಆಡಳಿತಕ್ಕೆ ಸೇರಿದ ಮಾನ್ಯಖೇಟ ಎಂದು ಗುರುತಿಸಲಾಗಿರುವ 7ನೇ ಶತಮಾನದಲ್ಲಿಯೇ ಸಾಂಸ್ಕೃತಿಕವಾಗಿ ಪ್ರಸಿದ್ಧಿ ಪಡೆದಿದ್ದ ಗಂಗರ ಕಾಲದ ಗಂಗಾ ರಾಜ ಮಾರ ನರಸಿಂಹನ ದಳಪತಿ ಶ್ರೀವಿಜಯಯಿಂದ ನಿರ್ಮಾಣವಾದ ಕಪಿಲೇಶ್ವರಸ್ವಾಮಿ ದೇವಸ್ಥಾನ ಮಾದರಿಯೂ ಸ್ತಬ್ಧ ಚಿತ್ರ ಹೊಂದಿರಲಿದೆ.

ಈ ಸ್ತಬ್ಧ ಚಿತ್ರದಲ್ಲಿ ದೇವನಹಳ್ಳಿಕೋಟೆ, ಮುಕ್ತಿನಾಥೇಶ್ವರ ದೇವಾಲಯ, ಕಪಿಲೇಶ್ವರಸ್ವಾಮಿ ದೇವಸ್ಥಾನ, ಮಣ್ಣೆ, ಶಿವಗಂಗೆ ಬೆಟ್ಟ ಒಳಗೊಂಡಿದೆ.

Quote - ಮೈಸೂರು ದಸರಾ ಸ್ತಬ್ಧ ಚಿತ್ರ ಮೆರವಣಿಗೆ ಸಮಿತಿ ಅನುಮೋದನೆ ನೀಡಿರುವ ಜಿಲ್ಲೆಯ ಐತಿಹಾಸಿಕ ಸ್ಥಳಗಳನ್ನು ಬಿಂಬಿಸುವ ಸ್ತಬ್ಧ ಚಿತ್ರದ ತಯಾರಿ ಹಾಗೂ ಸಿದ್ಧತೆ ನಡೆಯುತ್ತಿದೆ. ವಿಶ್ವ ವಿಖ್ಯಾತ ದಸರಾ ಜಂಬೂ ಸವಾರಿಯಲ್ಲಿ ಪ್ರದರ್ಶನ ನೀಡಲಿದೆ ಉಮಾ ಉಪ ನಿರ್ದೇಶಕರು( ಪ್ರಭಾರ) ಖಾದಿ ಮತ್ತು ಗ್ರಾಮ ಉದ್ಯೋಗ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.