ದೇವನಹಳ್ಳಿ: ವಿದೇಶದಿಂದ ಸಿದ್ಧ ಆಹಾರ ಟಿನ್ಗಳಲ್ಲಿ 94 ಕೆ.ಜಿ ಹೈಡ್ರೊ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ನಾಲ್ವರು ವಿದೇಶಿಯರನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.

ಜಪ್ತಿ ಮಾಡಿರುವ ಹೈಡ್ರೊ ಗಾಂಜಾದ ಮೌಲ್ಯ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ₹94 ಕೋಟಿ ಎಂದು ತಿಳಿದು ಬಂದಿದೆ.

ಮೊದಲೇ ದೊರೆತ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ವಿದೇಶದಿಂದ ಬರುವ ಪ್ರಯಾಣಿಕರ ಮೇಲೆ ವೈಮಾನಿಕ ಗುಪ್ತಚರ ಘಟಕದ ಅಧಿಕಾರಿಗಳು ತೀವ್ರ ನಿಗಾ ಇಟ್ಟಿದ್ದರು. ಕಳ್ಳಸಾಗಣೆ ಪ್ರಕರಣಗಳಲ್ಲಿ ಹಳೆಯ ಆರೋಪಿಗಳಾಗಿದ್ದ ವಿದೇಶಿಗರನ್ನು ತಪಾಸಣೆ ಮಾಡಿದಾಗ ದೊಡ್ಡ ಪ್ರಮಾಣದ ಹೈಡ್ರೊ ಗಾಂಜಾ ಪತ್ತೆಯಾಯಿತು.

ನಾಲ್ವರಲ್ಲಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು. ಎರಡು ಜೋಡಿ ಇಲ್ಲಿಯ ದೊಡ್ಡ ಹೋಟೆಲ್ಗಳಿಗೆ ಟಿನ್ನಲ್ಲಿ ಸಿದ್ಧ ಆಹಾರ ಪೂರೈಸಲು ಬಂದಿದ್ದೇವೆ ಎಂದು
ನಂಬಿಸಿದ್ದರು.

ಈ ಮೊದಲೇ ವಿವಿಧ ಕಳ್ಳಸಾಗಾಣಿಕೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಇತಿಹಾಸ ಗಮನಿಸಿದ ಕಸ್ಟಮ್ಸ್ ಅಧಿಕಾರಿಗಳು ಅವರು ತಮ್ಮೊಂದಿಗೆ ತಂದಿದ್ದ ಸಿದ್ಧ ಆಹಾರದ ಟಿನ್ ತೆರೆದು ಪರಿಶೀಲಿಸಿದರು. ಅದರೊಳಗೆ ಹೈಡ್ರೊ ಗಾಂಜಾ ಪತ್ತೆಯಾಯಿತು.

ನಾಲ್ವರು ವಿದೇಶಿಯರ ಮೇಲೆ ಎನ್ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.