ಭಕ್ತರಿಗೆ ಕೋಸಂಬರಿ, ಪಾನಕ, ಮಜ್ಜಿಗೆ ವಿತರಣೆ

ಸೋಮವಾರ, ಏಪ್ರಿಲ್ 22, 2019
31 °C
ಶ್ರೀರಾಮನ ಆದರ್ಶ ಗುಣಗಳನ್ನು ಪಾಲನೆ ಮಾಡಿಕೊಂಡು ಹೋಗಲು ಸಲಹೆ

ಭಕ್ತರಿಗೆ ಕೋಸಂಬರಿ, ಪಾನಕ, ಮಜ್ಜಿಗೆ ವಿತರಣೆ

Published:
Updated:
Prajavani

ವಿಜಯಪುರ: ಶ್ರೀರಾಮನವಮಿಯ ಅಂಗವಾಗಿ ಎಲ್ಲೆಡೆ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.

ಶುಕ್ರವಾರದಿಂದಲೇ ದೇವಾಲಯಗಳನ್ನು ಸ್ವಚ್ಛಗೊಳಿಸಿದ್ದ ಭಕ್ತರು, ದೇವಾಲಯಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಿ, ಮಾವಿನ ಎಲೆಗಳು, ಬೇವಿನ ಹೂಗಳಿಂದ ತೋರಣಗಳನ್ನು ಕಟ್ಟಿ ಪೂಜೆ ಸಲ್ಲಿಸಿದರು. ದೇವರ ಮೂರ್ತಿಗಳಿಗೆ ಹೂವಿನ ವಿಶೇಷ ಅಲಂಕಾರ ಮಾಡಿ, ದೇವಾಲಯಗಳಿಗೆ ಬಂದಿದ್ದ ಭಕ್ತರಿಗೆ ಕೋಸಂಬರಿ, ಪಾನಕ, ಮಜ್ಜಿಗೆಗಳನ್ನು ವಿತರಣೆ ಮಾಡಿದರು.

ಇಲ್ಲಿನ ಆನೆಛತ್ರದ ಉತ್ತರಮುಖಿ ಕಾರ್ಯಸಿದ್ಧಿ ಭಕ್ತಾಂಜನೇಯಸ್ವಾಮಿ ದೇವಾಲಯ, ಚನ್ನರಾಯಪಟ್ಟಣ ಹೋಬಳಿ ಐಬಸಾಪುರದ ಅಭಯ ಆಂಜನೇಯಸ್ವಾಮಿ ದೇವಾಲಯ, ಶಿಡ್ಲಘಟ್ಟ ಕ್ರಾಸ್, ದೇವನಹಳ್ಳಿ ರಸ್ತೆಯಲ್ಲಿರುವ ಹನುಮಾನ್ ದೇವಾಲಯ, ಭಟ್ರೇನಹಳ್ಳಿ ರಸ್ತೆಯಲ್ಲಿರುವ ಆಂಜನೇಯ ದೇವಾಲಯಗಳಲ್ಲಿ ಪೂಜೆ ನೆರವೇರಿಸಲಾಯಿತು.

ನಗರದ ಗುರಪ್ಪನಮಠದ ಮೂಡಲ ಆಂಜನೇಯಸ್ವಾಮಿ ಚನ್ನರಾಯಪಟ್ಟಣ ಸರ್ಕಲ್, ಸ್ವಾನ್ ಸಿಲ್ಕ್ ಕಾರ್ಖಾನೆ ಸರ್ಕಲ್ ಸೇರಿದಂತೆ ಪ್ರತಿಯೊಂದು ಹಳ್ಳಿಯಲ್ಲೂ ಆಂಜನೇಯಸ್ವಾಮಿ ದೇವಾಲಯಗಳು, ಶ್ರೀರಾಮ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು.

ಧಾರ್ಮಿಕ ಮುಖಂಡ ಅಶ್ವಥಪ್ಪ ಮಾತನಾಡಿ, ಹಬ್ಬಗಳ ಆಚರಣೆಗಳ ಮಾಡುವುದು ಹೆಚ್ಚಲ್ಲ. ಶ್ರೀರಾಮನ ಆದರ್ಶ ಗುಣಗಳನ್ನು ಪಾಲನೆ ಮಾಡಿಕೊಂಡು ಹೋಗಬೇಕು. ಮಾನವೀಯ ಸಂಬಂಧಗಳು ಗಟ್ಟಿಗೊಳ್ಳಬೇಕು, ಆದರ್ಶ ಪತಿ, ಆದರ್ಶ ಪತ್ನಿ ಸಹೋದರ ಪ್ರೀತಿ, ಪಿತೃವಾಕ್ಯ ಪರಿಪಾಲನೆಯಂತಹ ಮಹತ್ವದ ಗುಣಗಳನ್ನು ಕಲಿಸಿದ ಶ್ರೀರಾಮ ಈಗಿನ ಸಮಾಜಕ್ಕೆ ಆದರ್ಶವಾಗಬೇಕು. ಶ್ರೀರಾಮನ ಆದರ್ಶಗಳನ್ನು ಇಂದಿನ ಯುವಪೀಳಿಗೆಗೆ ತಿಳಿಸಬೇಕಾಗಿದೆ. ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ದೇವಾಲಯಕ್ಕೆ ಬಂದಿದ್ದ ಭಕ್ತರಿಗೆ ಪ್ರಸಾದ ವ್ಯವಸ್ಥೆ, ಊಟದ ವ್ಯವಸ್ಥೆ ಮಾಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !