ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಸಿಲಿನ ಬೇಗೆಗೆ ಕೋಳಿಗಳ ಸಾವು ಹಬ್ಬದ ಮುನ್ನವೇ ಬೆಲೆ ಏರಿಕೆ ಬಿಸಿ

Published : 9 ಏಪ್ರಿಲ್ 2024, 8:27 IST
Last Updated : 9 ಏಪ್ರಿಲ್ 2024, 8:27 IST
ಫಾಲೋ ಮಾಡಿ
Comments

ದೊಡ್ಡಬಳ್ಳಾಪುರ: ಬೇಸಿಗೆ ಬೇಗೆಗೆ ಕೋಳಿಫಾರಂಗಳಲ್ಲಿ ಕೋಳಿ ಸಾಯುತ್ತಿರುವ ಹಿನ್ನೆಲೆ ಕೋಳಿ ಉತ್ಪಾದನೆ ಕುಸಿದಿದ್ದು, ಮಾರಾಟಕ್ಕೆ ಮಾಂಸದ ಕೊರತೆ ಉಂಟಾಗಿದೆ.

ಯುಗಾದಿ ಹಬ್ಬಕ್ಕೆ ಸಹಜವಾಗಿಯೇ ಕೋಳಿ ಬೆಲೆ ಹೆಚ್ಚಾಗುತ್ತದೆ. ಹಾಗಾಗಿಯೇ ಹಬ್ಬಕ್ಕೆ ಮಾರುಕಟ್ಟೆಗೆ ಬರುವಂತೆ ರೈತರು ಫಾರಂ ಕೋಳಿಗಳನ್ನು ಸಾಕಾಣಿಕೆ ಮಾಡುತ್ತಾರೆ. ಆದರೆ ಈ ಬಾರಿ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ಕೋಳಿಗಳು ಸಾಕಾಣಿಕೆ ಕೇಂದ್ರದಲ್ಲಿ ಸಾಯುವುದು ಹೆಚ್ಚಾಗಿದೆ.

ಹೀಗಾಗಿಯೇ ಕೋಳಿ ಮಾಂಸ ಇಂದು ಮಾರುಕಟ್ಟೆಯಲ್ಲಿ 1ಕೆ.ಜಿಗೆ ₹240 ಗಳಿಗೆ ಮಾರಾಟವಾಗುತ್ತಿದೆ. ಒಂದು ವಾರದ ಹಿಂದೆ 1 ಕೆ.ಜಿಗೆ ₹210 ಇತ್ತು ಎನ್ನುತ್ತಾರೆ ಕೋಳಿ ಮಾರಾಟಗಾರ ಆದಿಲ್‌ಪಾಷ.

ಸಾಮಾನ್ಯವಾಗಿ ಯುಗಾದಿ ಹಬ್ಬ ಒಂದು ವಾರ ಇರುವಂತೆ ಮಾರುಕಟ್ಟೆಗೆ ಕೋಳಿ ಸಬರಾಜು ಕಡಿಮೆಯಾಗುತ್ತದೆ. ಹಾಗೆಯೇ ಖರೀದಿಯು ಕಡಿಮೆಯಾಗುತಿತ್ತು. ಆದರೆ ಈ ಬಾರಿ ಖರೀದಿ ಮಾತ್ರ ಕಡಿಮೆಯಾಗಿಲ್ಲ. ರಂಜಾನ್‌, ಯುಗಾದಿ ಹಬ್ಬ ಎರಡೂ ಸಹ ಒಂದೆರಡು ದಿನಗಳ ಅಂತರದಲ್ಲೇ ಇರುವುದರಿಂದ ಕೋಳಿ ಮಾಂಸದ ಬೆಲೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ಇದಲ್ಲದೆ ಲೋಕಸಭಾ ಚುನಾವಣೆಯು ಇರುವುದರಿಂದ ಜನಸಾಮಾನ್ಯರ ಕೈಯಲ್ಲಿ ಹಣ ಇರುವುದು ಹಾಗೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮಿ ಯೋಜನೆಯಿಂದಾಗಿ ಮಹಿಳೆಯರ ಕೈಯಲ್ಲೂ ಹಣ ಇರುವುದರಿಂದ ಕೊಳ್ಳುವ ಶಕ್ತಿ ವೃದ್ಧಿಯಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಕೋಳಿ ಮಾಂಸ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯು ಇದೆ ಎನ್ನುವ ಲೆಕ್ಕಾಚಾರ ಕೋಳಿ ಮಾರಾಟಗಾರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT