ದೊಡ್ಡಬಳ್ಳಾಪುರ: ಆರೋಗ್ಯವೇ ಮಹಾಭಾಗ್ಯ. ಆದರೆ ಇಂದು ಆರೋಗ್ಯದ ಬಗ್ಗೆ ನಾನಾ ತಪ್ಪು ಕಲ್ಪನೆಗಳಿವೆ. ನಮ್ಮ ಆರೋಗ್ಯದ ಬಗ್ಗೆ ಸರಿಯಾದ ತಿಳುವಳಿಕೆ ಇದ್ದರೆ ಸಮಸ್ಯೆ ಪರಿಹರಿಸಿಕೊಳ್ಳಲು ಸುಲಭವಾಗುತ್ತದೆ ಎಂದು ಹಿರಿಯ ವೈದ್ಯ ಡಾ.ಟಿ.ಎಚ್.ಆಂಜಿನಪ್ಪ ಹೇಳಿದರು.

ತಾಲ್ಲೂಕಿನ ಗುಂಡಸಂದ್ರದ ಜಿ.ಕೆ.ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ನಡೆದ ಆವಿಷ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಂಸ, ಮೊಟ್ಟೆ ತಿನ್ನಬಾರದೆಂಬ ಸಲಹೆಗಳಲ್ಲಿ ಅರ್ಥವಿಲ್ಲ. ಮೊಟ್ಟೆಯಲ್ಲಿ ಸಾಕಷ್ಟು ಪೌಷ್ಟಿಕಾಂಶವಿದೆ. ಸೇಬಿಗಿಂತ ಸೀಬೆ ಹಣ್ಣಿನಲ್ಲಿ ವಿಟಮಿನ್ ಹೆಚ್ಚಾಗಿದೆ. ಆದರೆ ಆಹಾರ ಪದಾರ್ಥಗಳನ್ನು ತಿನ್ನುವ ವಿಚಾರದಲ್ಲಿ ತಪ್ಪು ಸಂದೇಶಗಳು ರವಾನೆಯಾಗುತ್ತಿರುವುದು ವಿಷಾದಕರ ಎಂದರು.

ಅಪಘಾತವಾದ ವ್ಯಕ್ತಿಗೆ ನೀರು ಕುಡಿಸುವುದು ಅಪಾಯಕರ. ಯಾವುದೇ ಕಾರಣಕ್ಕೂ ನೀರು ಕುಡಿಯದಿದ್ದರೆ ಆತ ಬದುಕುವ ಸಂಭವವಿರುತ್ತದೆ. ರೋಗಿಗಳು ತಮ್ಮ ಗುಪ್ತ ರೋಗಗಳ ಬಗ್ಗೆ ತಿಳುವಳಿಕೆ ಇಲ್ಲದ ವ್ಯಕ್ತಿಗಳಿಂದ ಚಿಕಿತ್ಸೆ ಪಡೆದು ಅಪಾಯ ತಂದುಕೊಳ್ಳಬಾರದು. ಯಾವುದೇ ಮುಜುಗರವಿಲ್ಲದೇ ವೈದ್ಯರೊಂದಿಗೆ ಹೇಳಿಕೊಂಡು ಕಾಯಿಲೆಗಳನ್ನು ಗುಣಪಡಿಸಕೊಳ್ಳುವಂತೆ ಸಲಹೆ ನೀಡಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಆರ್.ಗೋವಿಂದರಾಜು, ಶಾಲಾ ಕಾರ್ಯದರ್ಶಿ ಗೋಪಾಲಕೃಷ್ಣ, ಶಾಲಾ ಮುಖ್ಯ ಶಿಕ್ಷಕ ಸುನಿಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.