ದೊಡ್ಡಬಳ್ಳಾಪುರ: ಪತಿಯ ಕುಟುಂಬದವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪಿಕಪ್ ಡ್ಯಾಂಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋತೇನಹಳ್ಳಿ ನಿವಾಸಿ ಪುಷ್ಪಾ (28) ಮೃತರು.

ಘಾಟಿ ಸಮೀಪದ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂನಲ್ಲಿ ಮಹಿಳೆಯ ಮೃತದೇಹ ಭಾನುವಾರ ಪತ್ತೆಯಾಗಿದೆ. ಪತಿ, ಅತ್ತೆ, ಮಾವ, ಮೈದುನ ಹಾಗೂ ಸಂಬಂಧಿಕರ ಕಿರುಕುಳ ಆರೋಪದ ಕುರಿತು ವಿಡಿಯೊ ಮಾಡಿ
ಸಂಬಂಧಿಕರಿಗೆ ವಾಟ್ಸ್ಆ್ಯಪ್ನಲ್ಲಿ ಹಂಚಿಕೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋತೇನಹಳ್ಳಿ ಗ್ರಾಮದ ನಿವಾಸಿ ಪುಷ್ಪಾ ಅವರನ್ನು ತಪಸೀಹಳ್ಳಿ ವೇಣು ಜತೆ ಒಂದು ವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ವರದಕ್ಷಿಣೆ ಹಾಗೂ ನಿವೇಶನಕ್ಕಾಗಿ ಕಿರುಕುಳದಿಂದ ಪುಷ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ತಂದೆ ನಾರಾಯಣಪ್ಪ ಆರೋಪಿಸಿದ್ದಾರೆ. ದೊಡ್ಡ
ಬಳ್ಳಾಪುರ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಡಿಯೊದಲ್ಲಿ ಏನಿದೆ?

ಮೃತ ಪುಷ್ಪ ಅವರು ಆತ್ಮಹತ್ಯೆಗೂ ಮುನ್ನ ಎಂಟು ನಿಮಿಷದ ವಿಡಿಯೊ ಮಾಡಿದ್ದಾರೆ. ವಿಡಿಯೊದಲ್ಲಿ ಅವರು ‘ಅತ್ತೆ ಮಾವ ಮೈದುನಾ ಮತ್ತು ಗಂಡ ಸದಾ ಪೋನ್ ಮಾಡಿ ಹಣ ನಿವೇಶನ ತರುವಂತೆ ಕಿರುಕುಳ ನೀಡುತ್ತಿದ್ದ ಎಲ್ಲಾ ಮಾಹಿತಿ ನನ್ನ ಮೊಬೈಲ್ನಲ್ಲಿ ರೆಕಾರ್ಡ್ ಆಗಿತ್ತು.

ಈ ಮೊಬೈಲ್ ಕಿತ್ತುಕೊಂಡು ಪ್ಲಾಶ್ ಮಾಡಿಸುವ ಮೂಲಕ ಸಾಕ್ಷಿ ನಾಶಮಾಡಿದ್ದಾರೆ. ನಾನು ಸತ್ತರೆ ನನ್ನ ಗಂಡನ ಮನೆಯಲ್ಲೇ ಹೂಳಬೇಕು ಎನ್ನುವುದು ನನ್ನ ಕೊನೆಯ ಆಸೆ. ಊಟದಲ್ಲಿ ವಿಷ ಹಾಕಿ ಸಾಯಿಸಲು ಪ್ರಯತ್ನಿಸಿದರು. ಆದರೆ ಬದುಕುಳಿದೆ. ಅಂದಿನಿಂದ ನಾನು ಅಡುಗೆ ಮಾಡಿದರೆ ಮಾತ್ರ ಊಟ ಮಾಡುತ್ತಿದ್ದೆ. ನಿವೇಶನ ತರದಿದ್ದರೆ ನನ್ನ ಗಂಡನಿಗೆ 2ನೇ ಮದುವೆ ಮಾಡುವುದಾಗಿ ಹೆದರಿಸುತ್ತಿದ್ದರು.

ಗಂಡನ ಮನೆಯಲ್ಲಿ ಕೆಲಸದ ಆಳಿನಂತೆ ಇದ್ದೆ. ಎಲ್ಲಾ ನನ್ನದೇ ತಪ್ಪು ಎನ್ನುವಂತೆ ಬಿಂಬಿಸುವ ಮೂಲಕ ನನ್ನನ್ನು ಹುಚ್ಚಿಯಾಗಿಸಿದ್ದರು. ನನ್ನ ಬದುಕನ್ನು ನೋಡಿ ಎಲ್ಲರು ನಗುವಂತೆ ಮಾಡಿದವರಿಗೆ ತಕ್ಷ ಶಿಕ್ಷೆಯಾಗಬೇಕು. ಇಂತಹ ನರಕದ ಬದುಕು ಬೇರೆ ಯಾವ ಹೆಣ್ಣು ಮಕ್ಕಳಿಗೂ ಆಗಬಾರದು’ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.