ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ | ದ್ರಾಕ್ಷಿ ಬೆಳೆಗೆ ಡೌನಿಮಿಲ್ಡ್ ರೋಗ: ಆತಂಕ

Published 19 ಡಿಸೆಂಬರ್ 2023, 4:24 IST
Last Updated 19 ಡಿಸೆಂಬರ್ 2023, 4:24 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಮೂರು ದಿನಗಳಿಂದ ಮೋಡ ಮುಸುಕಿದ ವಾತಾವರಣ ಹಾಗೂ ಆಗಾಗ ಜಿಟಿ ಜಿಟಿ ಮಳೆಯಾಗುತ್ತಿದೆ. ಚಳಿಗಾಲ ವಾತಾವರಣದಲ್ಲಿ ಹೆಚ್ಚು ತೇವಾಂಶ ಇರಲಿದೆ. ಇದರಿಂದ ದ್ರಾಕ್ಷಿ ಬೆಳೆಗಳಲ್ಲಿ ಡೌನಿಮಿಲ್ಡ್ ರೋಗ ಕಾಣಿಸಿಕೊಳ್ಳುತ್ತಿದೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ.

ತಾಲ್ಲೂಕಿನ ಬಿಜ್ಜವಾರ, ಇರಿಗೇನಹಳ್ಳಿ, ವೆಂಕಟಗಿರಿಕೋಟೆ, ಬೀಡಿಗಾನಹಳ್ಳಿ, ದಿನ್ನೂರು, ಚನ್ನರಾಯಪಟ್ಟಣ, ಚೀಮಾಚನಹಳ್ಳಿ, ಬುಳ್ಳಹಳ್ಳಿ, ಗೊಡ್ಲುಮುದ್ದೇನಹಳ್ಳಿ, ರಂಗನಾಥಪುರ, ಕೊಮ್ಮಸಂದ್ರ, ಸಿಂಗವಾರ, ಹೊಸಹುಡ್ಯ ಮುಂತಾದ ಕಡೆ ದ್ರಾಕ್ಷಿ ಬೆಳೆಯುವ ರೈತರು ಹೆಚ್ಚಾಗಿದ್ದಾರೆ.

ಪ್ರೂನಿಂಗ್ (ಹೂವಿನಿಂದ ಕಾಯಿಯಾಗುವ ಹಂತ) ಮಾಡಿದ ನಂತರ ಚಿಗುರು ಬರುತ್ತಿರುವ ಬೆಳೆ ಹಾಗೂ ಪಾಲಿನೇಷನ್ ಆಗುತ್ತಿರುವ ಬೆಳೆಗೆ ರೋಗ ಕಾಣಿಸಿಕೊಳ್ಳುತ್ತಿದೆ. ರೋಗ ನಿಯಂತ್ರಣಕ್ಕಾಗಿ ರೈತರು ಹೆಚ್ಚು ಕ್ರಿಮಿನಾಶಕ ಸಿಂಪಡಣೆ ಮಾಡುವಂತಾಗಿದೆ.

ಸಂಜೆ 6ರ ನಂತರ ವಾತಾವರಣದಲ್ಲಿ ತೇವಾಂಶ ಹೆಚ್ಚಾಗುತ್ತಿದೆ. ಇದರ ಜತೆಗೆ ಮೋಡ ಕವಿದ ವಾತಾವರಣವಿದೆ. ಜಿಟಿ, ಜಿಟಿ ಮಳೆಯಾಗುತ್ತಿದೆ. ಇದರಿಂದ ಡೌನಿಮಿಲ್ಡ್ ರೋಗ ಹಾಗೂ ಪೌಡರಿಮಿಲ್ಡ್ ರೋಗ ಕಾಣಿಸಿಕೊಳ್ಳುತ್ತಿದೆ. ರೋಗ ನಿಯಂತ್ರಿಸಬೇಕಾದರೆ ದಿನವೊಂದಕ್ಕೆ ₹5-6 ಸಾವಿರ ಕ್ರಿಮಿನಾಶಕ ಸಿಂಪಡಣೆ ಮಾಡಬೇಕಾಗಿದೆ. ರೋಗ ನಿಯಂತ್ರಣಕ್ಕೆ ಬಾರದಿದ್ದರೆ ಬೆಳೆ ಕೈಗೆ ಸಿಗುವ ಅವಕಾಶ ಇರುವುದಿಲ್ಲ.

ರೈತರು, ತೀವ್ರ ನೀರಿನ ಅಭಾವದಲ್ಲೂ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಬೆಳೆಯುತ್ತಿರುವ ವಾಣಿಜ್ಯ ಬೆಳೆ ದ್ರಾಕ್ಷಿಗೆ ಕಾಡುತ್ತಿರುವ ರೋಗದಿಂದ ರೈತರು ಹೈರಾಣಾಗಿದ್ದಾರೆ. ಬೆಳೆ ಚೆನ್ನಾಗಿ ಬಂದರೆ ಬೆಲೆ ಸಿಗಲ್ಲ; ಬೆಲೆ ಇರುವಾಗ ಬೆಳೆಗಳಿಗೆ ಆಪತ್ತು ಎದುರಾಗುತ್ತದೆ. ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಮಾತ್ರ ವಿಮೆ ಪಡೆಯಬಹುದು. ಬೆಳೆ ರೋಗಕ್ಕೆ ತುತ್ತಾದರೆ ವಿಮೆ ಬರುವುದಿಲ್ಲ ಎಂದು ರೈತ ಹನುಮಪ್ಪ ಹೇಳುತ್ತಾರೆ.

ಕಡಿಮೆ ಖರ್ಚಿನಲ್ಲಿ ರೋಗ ನಿಯಂತ್ರಣಕ್ಕೆ ಸಹಕಾರಿ

ತಾಲ್ಲೂಕಿನಲ್ಲಿ 1200 ಹೆಕ್ಟೇರ್ ಪ್ರದೇಶದಲ್ಲಿ ರೈತರು ದ್ರಾಕ್ಷಿ ಬೆಳೆ ಬೆಳೆಯುತ್ತಿದ್ದಾರೆ. ಡೌನಿಮಿಲ್ಡ್ ರೋಗ ನಿಯಂತ್ರಣಕ್ಕೆ ಮೆಟಲಾಜಿಲ್ ಮತ್ತು ಮ್ಯಾಂಕೋಜೆಬ್ ಎರಡು ಮಿಶ್ರಣ ಮಾಡಿ 1ಲೀಟರ್ ನೀರಿಗೆ 2 ಗ್ರಾಂನಂತೆ ಬರೆಯಿಸಿಕೊಂಡು ಸಿಂಪಡಣೆ ಮಾಡಬಹುದು. ಬೋರ್ಡೋ ದ್ರಾವಣ ಕೂಡ ಸಿಂಪಡಣೆ ಮಾಡಬಹುದು. ಇದು ರೈತರಿಗೆ ಕಡಿಮೆ ಖರ್ಚಿನಲ್ಲಿ ರೋಗ ನಿಯಂತ್ರಣಕ್ಕೆ ತರಲು ಸಹಕಾರಿಯಾಗಲಿದೆ. ಆದರ್ಶ್ ಸಹಾಯಕ ತೋಟಗಾರಿಕೆ ಅಧಿಕಾರಿ ದೇವನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT