ನಿಯಂತ್ರಣ ಅಸಾಧ್ಯ ಹಸಿರು ಪಟಾಕಿಗಳನ್ನು ರಾತ್ರಿ 8 ರಿಂದ 10 ಗಂಟೆಯ ವರೆಗೂ ಮಾತ್ರವೆ ಸಿಡಿಸಲು ಜಿಲ್ಲಾಡಳಿತ ಸೂಚಿಸಿದೆ. ವಾಸ್ತವದಲ್ಲಿ ಇದು ಪಾಲಿಸಲು ಅಸಾಧ್ಯ. ಸಾರ್ವಜನಿಕರು ಹಬ್ಬದ ಸಂಭ್ರಮದಲ್ಲಿ ಹೆಚ್ಚು ಪಟಾಕಿಗಳನ್ನು ಸಿಡಿಸುತ್ತಾರೆ. ಅವರಿಗೆ ಇಂತಿಷ್ಟೇ ಸಮಯದಲ್ಲಿ ಪಟಾಕಿ ಸಿಡಿಸಿ ಎಂದು ನಿರ್ಬಂಧ ಹೇರಲು ಹಾಗೂ ನಿಯಮ ಪಾಲಿಸುವಂತೆ ನಿಗಾವಹಿಸಲು ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಸಾಕಷ್ಟಿದೆ. ಇವೆಲ್ಲವೂ ಪ್ರಚಾರದ ಮಾತುಗಳಷ್ಟೆ.
ಗಜೇಂದ್ರ ಯರ್ತಿಗಾನಹಳ್ಳಿ
ಪ್ರತಿಯೊಬ್ಬರು ಅವರವರ ಮನೆಯ ಮುಂದೆ ಪಟಾಕಿ ಸಿಡಿಸಿದರೇ ರಸ್ತೆಯ ಎಕ್ಕೆಲಗಳಲ್ಲಿ ಪಟಾಕಿ ತ್ಯಾಜ್ಯ ಸೃಷ್ಟಿಯಾಗುತ್ತದೆ. ಇದರ ವಿಲೇವಾರಿ ಹಾಗೂ ಸ್ವಚ್ಛತೆಗೆ ಸಾಕಷ್ಟು ಸಮಯ ಹಿಡಿಯುತ್ತದೆ. ಇದನ್ನು ತಪ್ಪಿಸಲು ಬೀದಿ ಒಂದರಂತೆ ಹತ್ತಿರದ ಬಯಲು ಪ್ರದೇಶದಲ್ಲಿ ಸಾರ್ವಜನಿಕರು ಮುಕ್ತವಾಗಿ ಎಲ್ಲರೂ ಒಂದಾಗಿ ಪಟಾಕಿ ಸಿಡಿಸುವಂತೆ ಜಿಲ್ಲಾಡಳಿತ ನಿಯಮ ರೂಪಿಸಬೇಕಿದೆ
ಅನಿಲ್ ಕುಮಾರ್ ಬಿದಲೂರು
ಪರಿಸರ ಮಾಲಿನ್ಯ ತಡೆಗಟ್ಟಲು ಪಟಾಕಿ ಬಿಟ್ಟು ಬೆಳಕಿನ ಹಬ್ಬ ದೀಪಾವಳಿಯಲ್ಲಿ ಅಣತೆ ಮೊಂಬತ್ತಿ ಬಳಕೆ ಮಾಡಿ ವಿದ್ಯುತ್ ದೀಪಾಲಂಕರಗಳ ಮೂಲಕ ಈ ಬಾರಿ ಹಬ್ಬ ಆಚರಣೆ ಮಾಡಿದರೇ ಯಾವುದೇ ಅಪಾಯಗಳು ಇರುವುದಿಲ್ಲ. ಯುವಕರು ಎಲ್ಲರೂ ಒಂದಾಗಿ ಹತ್ತಿರದ ದೇಗುಲಗಳಲ್ಲಿ ನೂರು ಸಾವಿರ ಲಕ್ಷ ಅಣತೆ ಹಚ್ಚುವ ಪ್ರತಿಜ್ಞೆ ಮಾಡಬೇಕು. ದೀಪವಾಳಿಯ ಮೂಲಕ ಕತ್ತಲನ್ನು ದೂರ ಮಾಡೋಣ