ವಿಜಯಪುರ ಹೋಬಳಿ ದಂಡಿಗಾನಹಳ್ಳಿ ರಸ್ತೆಯಲ್ಲಿ ಹೊಲವೊಂದರಲ್ಲಿ ಮೇವು ಹುಡುಕುತ್ತಿರುವ ಕುರಿಗಳು
ಜಿಲ್ಲೆಯ 17 ಹೋಬಳಿಗಳಲ್ಲಿ ಪ್ರತಿ ಹೋಬಳಿಯಲ್ಲಿ 100 ಟನ್ ನಷ್ಟು ಮೇವು ಶೇಖರಣೆ ಮಾಡಲು ಸಚಿವರು ಸೂಚನೆ ಕೊಟ್ಟಿದ್ದಾರೆ. ಜತೆಗೆ ಮೇವು–ನೀರು ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮವಹಿಸಲಾಗುತ್ತಿದೆ
–ಜಗದೀಶ್ ಉಪನಿರ್ದೇಶಕ ಪಶು ಪಾಲನಾ ಇಲಾಖೆ
ಬೇಸಿಗೆಯಲ್ಲಿ ರಾಸುಗಳಿಗೆ ಮೇವು ಒದಗಿಸುವುದು ಸವಾಲಿನ ಕೆಲಸವಾಗಿದೆ. ದುಡಿಮೆ ಮಾಡಿದ ಹಣವೆಲ್ಲಾ ಮೇವಿಗಾಗಿ ಖರ್ಚು ಮಾಡಬೇಕಾಗಿದೆ. ಸರ್ಕಾರ ನಮ್ಮತ್ತ ನೋಡಿ ಸಮಸ್ಯೆ ಬಗೆಹರಿಸಲಿ
ನಾರಾಯಣಪ್ಪ ರೈತ
‘37 ವಾರಗಳಿಗೆ ಆಗುವಷ್ಟು ಸಂಗ್ರಹವಿದೆ’
‘ಜಿಲ್ಲೆಯಲ್ಲಿ ನೀರಾವರಿ ಹೊಂದಿರುವ ರೈತರಿಗೆ ಈಗಾಗಲೇ ಮೇವಿನ ಬೀಜ ವಿತರಣೆ ಮಾಡಿದ್ದೇವೆ. ಮೇವು ಬರುತ್ತಿದೆ. 42476 ರೈತರಿಗೆ ಮೇವಿನ ಬೀಜಗಳ ಮಿನಿ ಕಿಟ್ ವಿತರಣೆ ಮಾಡಿದ್ದೇವೆ. 56513 ಹೆಕ್ಟೇರ್ ಪ್ರದೇಶದಲ್ಲಿ ರೈತರು ರಾಗಿ ಬೆಳೆದಿದ್ದು ಅದರಿಂದ ಹುಲ್ಲು ಲಭ್ಯವಿದೆ. 56 ಹೆಕ್ಟೇರ್ ಮುಸುಕಿನ ಜೋಳ 61 ಹೆಕ್ಟೇರ್ ಭತ್ತ ಬೆಳೆದಿದ್ದು ಮೇವು ಸಿಗುತ್ತಿದೆ. 37 ವಾರಗಳಿಗೆ ಸರಿಹೊಂದುವಷ್ಟು ಮೇವು ಇದೆ. ಭೂ ರಹಿತ ರೈತರಿಗೆ ಅಗತ್ಯಬಿದ್ದರೆ ಮೇವು ಒದಗಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರು ಸೂಚಿಸಿರುವಂತೆ ಟೆಂಡರ್ ನಡೆಸಲು ಸಿದ್ಧ ಮಾಡಿಕೊಂಡಿದ್ದೇವೆ ಎಂದು ಪಶು ಪಾಲನಾ ಇಲಾಖೆ ಉಪನಿರ್ದೇಶಕ ಜಗದೀಶ್ ತಿಳಿಸಿದರು.