ಹೊಸಕೋಟೆ: ನಗರದ ದಿ ಟೌನ್ ಕೋ ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. 13 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 8 ಅಭ್ಯರ್ಥಿಗಳು ಹಾಗೂ ಬಿಜೆಪಿ ಬೆಂಬಲಿತ 5 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಆಡಳಿತ ಮಂಡಳಿಗೆ ಫೆಬ್ರುವರಿ 9 ರಂದು ನಡೆದ ಚುನಾವಣೆಯಲ್ಲಿ ಅಂದೇ ಪ್ರಕಟವಾಗಬೇಕಿದ್ದ ಫಲಿತಾಂಶಕ್ಕೆ ಮತ ಎಣಿಕೆ ಸಂದರ್ಭದಲ್ಲೇ ಕೆಲ ಅಭ್ಯರ್ಥಿಗಳು ಚುನಾವಣೆ ಪಟ್ಟಿಯಲ್ಲಿ ಹೆಚ್ಚುವರಿ ಮತ ಸೇರಿಸಲಾಗಿದೆ ಎಂದು ಕೋರ್ಟ್ ಮೊರೆ ಹೋಗಿದ್ದರು. ಮತ ಎಣಿಕೆ ಪೂರ್ಣಗೊಳಿಸದೆ ಅರ್ಧಕ್ಕೆ ನಿಲ್ಲಿಸಲಾಗಿ ಮತಪತ್ರಗಳನ್ನು ಹೈಕೋರ್ಟ್ ಸುಪರ್ದಿಗೆ ಸಲ್ಲಿಸಲಾಗಿತ್ತು. ಗೆದ್ದ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡದೆ ತಡೆಯಲಾಗಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್ ನವೆಂಬರ್ 24 ರಂದು ಹೆಚ್ಚುವರಿ ಮತದಾರರ ಸೇರ್ಪಡೆಯನ್ನು ಅನೂರ್ಜಿತಗೊಳಿಸಿ ಫಲಿತಾಂಶ ಪ್ರಕಟಿಸಲು ಆದೇಶ ನೀಡಿತ್ತು.

ಚುನಾವಣೆಯಲ್ಲಿ ಜಯಶೀಲರಾದ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಿದರು.

ಸಾಮಾನ್ಯ ವರ್ಗದಿಂದ ಗೆದ್ದ ಅಭ್ಯರ್ಥಿಗಳು: ಮಂಜುನಾಥ್, ಎಸ್.ಬಲ್ಪ್, ಎ.ಅಪ್ಸರ್, ಕಿರಣ್ ಕುಮಾರ್ ಕೆ., ಕಿರಣ್ ಕೆ., ನಾಗರಾಜ್ ಬಿ., ಅಕ್ಬರ್ ಪಾಷ, ವಿಷ್ಣು ಜಿ.ಯು.

ಪರಿಶಿಷ್ಟ ಜಾತಿಯಿಂದ ನಾಗರಾಜ್ ಎನ್.,

ಪರಿಶಿಷ್ಟ ಪಂಗಡದಿಂದ ಮುರಳಿ ಎಸ್.,

ಹಿಂದುಳಿದ ವರ್ಗ ಎ ಯಿಂದ ಬಾಲಚಂದ್ರನ್,

ಹಿಂದುಳಿದ ವರ್ಗ ಬಿ ಯಿಂದ ಎಚ್.ಎಸ್. ಗೋಪಾಲ,

ಮಹಿಳಾ ಮೀಸಲಾತಿ ಸ್ಥಾನದಿಂದ ವೆಂಕಟಲಕ್ಷ್ಮಿ ಬಿ. ಹಾಗೂ ಸರೋಜಮ್ಮ ಎಂ. ಜಯಗಳಿಸಿದ್ದಾರೆ.

ಹೊಸಕೋಟೆ ನಗರ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಬೈರೇಗೌಡ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ರಾಜಶೇಕರ್ ಗೌಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೃಷ್ಣಮೂರ್ತಿ, ಸದಾನಂದ್, ಸುಭಾಷ್ ಗೌಡ, ನವಾಜ್, ಅಂಜದ್, ಬಚ್ಚಣ್ಣ, ಅನೂಪ್ ಗೌಡ, ರಾಕೇಶ್, ಕೇಶವ್ ಮೂರ್ತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.