ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆಗೆ ಕೆರೆಯಂತಾಗುವ ಶಾಲಾ–ಕಾಲೇಜು ಆವರಣ

ಹೊಸಕೋಟೆ: ವಿದ್ಯಾರ್ಥಿ, ಪ್ರಾಂಶುಪಾಲರ ಮನವಿಗೆ ಸಿಗದ ಸ್ಪಂದನೆ
ವೆಂಕಟೇಶ್ ಡಿ.ಎನ್
Published 15 ಆಗಸ್ಟ್ 2024, 8:12 IST
Last Updated 15 ಆಗಸ್ಟ್ 2024, 8:12 IST
ಅಕ್ಷರ ಗಾತ್ರ

ಹೊಸಕೋಟೆ: ಸಣ್ಣ ಮಳೆ ಬಂದರೂ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಾಲಕರ ಮತ್ತು ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಆವರಣ ಕರೆಯಂತಾಗುತ್ತದೆ.

ಒಂದೇ ಆವರಣದಲ್ಲಿ ಪದವಿ ಪೂರ್ವ ಕಾಲೇಜು, ಬಾಲಕರ ಮತ್ತು ಬಾಲಕಿಯರ ಎರಡು ಸರ್ಕಾರಿ ಪ್ರೌಢಶಾಲೆ ಇದೆ. ಮಳೆ ಬಂದರೆ ಶಾಲೆ–ಕಾಲೇಜಿನ ವಿದ್ಯಾರ್ಥಿಗಳು ತರಗತಿಗೆ ಹೋಗಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಂತೂ ಕಾಲೇಜಿನ ಒಳಗೆ ಹೋಗುವುದೇ ಸಾಹಸ ಕೆಲಸ.

ಒಮ್ಮೊಮ್ಮೆ ಜೋರು ಮಳೆ ಬಂದರೆ ವಾರಗಟ್ಟಲೆ ಶಾಲೆಯ ಆವರಣದಲ್ಲಿ ನೀರು ನಿಲ್ಲುತ್ತದೆ. ಆಟದ ಮೈದಾನ ಕೆಸರು ಗದ್ದೆಯಂತಾಗುತ್ತದೆ. ಆಗ ತಿಂಗಳುಗಟ್ಟಲೇ ಕ್ರೀಡಾ ಚಟುವಟಿಕೆಯಿಂದ ವಿದ್ಯಾರ್ಥಿಗಳು ದೂರು ಇರಬೇಕು.

ಈ ಸಮಸ್ಯೆಯನ್ನು ಪರಿಹರಿಸಬೇಕು, ಶಾಲಾ ಆವರಣ ಮತ್ತು ಮೈದಾನವನ್ನು ಅಭಿವೃದ್ಧಿಗೊಳಿಸಬೇಕೆಂದು ಎಷ್ಟೇ ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನ ಆಗಿಲ್ಲ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುಸುತ್ತಾರೆ.

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಇಲ್ಲ ಎನ್ನುವ ಹೊತ್ತಿನಲ್ಲಿ, ಈ ಶಾಲೆಗಳಲ್ಲಿ 1,000ಕ್ಕೂ ಹೆಚ್ಚು ಹಾಗೂ ಕಾಲೇಜಿನಲ್ಲ ಒಂದು ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ‌. ಆದರೆ ಶಾಲೆ–ಕಾಲೇಜಿನಲ್ಲಿ ಮೂಲ ಸೌಕರ್ಯಗಳಿಲ್ಲ. ಸರ್ಕಾರಿ ಶಾಲಾ–ಕಾಲೇಜಿನ ವಿದ್ಯಾರ್ಥಿಗಳ ಹಿತದೃಷ್ಟಿಯಲ್ಲಿ ಶಾಲಾ ಆವರಣ ಮತ್ತು ಮೈದಾನವನ್ನು ಅಭಿವೃದ್ಧಿಗೊಳಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನ ಹರಿಸಬೇಕೆಂದು ಒತ್ತಾಯಿಸಿದರು.

ಭಾಷಣ ಸಾಕು; ಶಾಲೆಗಳ ಅಭಿವೃದ್ಧಿಗೊಳಿಸಿ

ಸರ್ಕಾರಿ ಶಾಲೆಗಳ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಜನಪ್ರತಿನಿಧಿಗಳು ಅವುಗಳಿಗೆ ಕನಿಷ್ಠ ಮೂಲ ಸೌಲಭ್ಯ ಒದಗಿಸಲು ಕ್ರಮವಹಿಸದೆ ಇರುವುದು ಅವರ ತೋರಿಕೆ ಪ್ರೀತಿಗೆ ಹಿಡಿದ ಕನ್ನಡಿ. ಸ್ಥಳೀಯ ಜನಪ್ರತಿನಿಧಿ ರಾಜಕೀಯ ಅನುಕೂಲವಿದ್ದರೆ ಮಾತ್ರ ಶಾಲಾ ಕಾಲೇಜುಗಳತ್ತ ಗಮನ ಹರಿಸುತ್ತಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆಯಿಂದ ಕೆಸರುಮಯ ಆಗಿರುವ ಶಾಲಾ–ಕಾಲೇಜು ಆವರಣ
ಮಳೆಯಿಂದ ಕೆಸರುಮಯ ಆಗಿರುವ ಶಾಲಾ–ಕಾಲೇಜು ಆವರಣ
ಸಣ್ಣ ಮಳೆಗೂ ಕಾಲೇಜು ಆವರಣದ ಕೆಸರುಗದ್ದೆಯಾಗುತ್ತದೆ. ಈ ಬಗ್ಗೆ ಹಲವು ಬಾರಿ ನಾವು ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರಿ ಶಾಲಾ ಕಾಲೇಜುಗಳೆಂದರೆ ಏಕಿಷ್ಟು ತಾತ್ಸಾರ?.
ಹೆಸರು ಹೇಳು ಇಚ್ಚಿಸದ ವಿದ್ಯಾರ್ಥಿ

ಸಮ‌ಸ್ಯೆ ಪರಿಹಾರ; ನಮ್ಮ ವ್ಯಾಪ್ತಿ ಮೀರಿದ್ದು

ನಾನು ಕಾಲೆಜಿಗೆ ಬಂದಾಗಿನಿಂದ ಈ ಸಮಸ್ಯೆ ಪರಿಹರಿಸುವ ಸಲುವಾಗಿ ಶಾಸಕರ ಅಧಿಕಾರಿಗಳ ಗಮನಕ್ಕೆ ತರುತ್ತಲೇ ಇದ್ದೇನೆ. ಆದರೆ ಈವರೆಗೂ ಯಾರಿಂದಲೂ ಸ್ಪಂದನೆ ದೊರೆತಿಲ್ಲ. ಈ ಸಮಸ್ಯೆಯಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಪ್ರಾಂಶುಪಾಲರು ಉಪನ್ಯಾಸಕರು ಮತ್ತು ಸಿಬ್ಬಂದಿಗೂ ತೊಂದರೆಯಾಗುತ್ತಿದೆ. ಈ ಸಮಸ್ಯೆ ಪರಿಹರಿಸುವುದು ನಮ್ಮ ವ್ಯಾಪ್ತಿ ಮೀರಿದ್ದು. ಚಂದ್ರಮರಕಳ ಪ್ರಾಂಶುಪಾಲ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT