ಸೋಮವಾರ, ಅಕ್ಟೋಬರ್ 26, 2020
21 °C

ಕನ್ನಸಂದ್ರದಲ್ಲಿ ಅಪ್ರಕಟಿತ ಶಿಲಾಶಾಸನ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಸೋಲೂರು ಸೀಮೆಗೆ ಸೇರಿರುವ ಕನ್ನಸಂದ್ರದಲ್ಲಿ 15ನೇ ಶತಮಾನಕ್ಕೆ ಸೇರಿರುವ ಹೊಯ್ಸಳರ ಕಾಲದ 3 ಶಿಲಾಶಾಸನಗಳು ಮತ್ತು ಮಹಾಸತಿ ಕಲ್ಲೊಂದನ್ನು ಪತ್ತೆ ಮಾಡಿರುವುದಾಗಿ ಕನ್ನಡ ಪ್ರಾಧ್ಯಾಪಕ ಹಾಗೂ ಇತಿಹಾಸ ಸಂಶೋಧಕ ಪ್ರೊ.ಅದರಂಗಿ ರುದ್ರೇಶ್‌ ತಿಳಿಸಿದರು.

ಕನ್ನಸಂದ್ರದಲ್ಲಿ ಕ್ಷೇತ್ರ ಕಾರ್ಯ ನಡೆಸಿದ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಗ್ರಾಮದ ಪಕ್ಕದಲ್ಲಿ ಇರುವ ಕೆರೆಯಿಂದ ಊರಿಗೆ ಕನ್ನಸಂದ್ರ ಎಂದು ಹೆಸರು ಬಂದಿದೆ. ಕನ್ಯೆ ಸಮುದ್ರ ಎಂದು ಕರೆಯಲಾಗುತ್ತಿತ್ತು. ನಂತರ ಕನ್ನಸಂದ್ರ ಎಂದು ಬಳಕೆಗೆ ಬಂದಿರಬಹುದು. ಶಿಥಿಲವಾಗಿರುವ ಬಸವಣ್ಣ ದೇವಾಲಯವಿದೆ. ಕಂಬದಲ್ಲಿ ಬಸವಣ್ಣನನ್ನು ಕೆತ್ತಲಾಗಿದೆ. ಹೊಯ್ಸಳರ ಕಾಲದ ಮಹಾಸತಿ ಕಲ್ಲು ರಕ್ಷಣೆ ಇಲ್ಲದೆ ಪಾಳುಮನೆ  ಒಳಗೆ ಪತ್ತೆಯಾಗಿದೆ. ಇತಿಹಾಸ ತಜ್ಞರಾದ ಡಾ.ಎಚ್‌.ಎಸ್‌.ಗೋಪಾಲ್‌ ರಾವ್‌ ತಂಡದವರನ್ನು ಕನ್ನಸಂದ್ರಕ್ಕೆ ಕರೆದೊಯ್ದು ಗ್ರಾಮದ ಬಗ್ಗೆ ತಳಸ್ಪರ್ಶಿ ಅಧ್ಯಯನ ನಡೆಸಲಾಗುವುದು ಎಂದರು.

ಬಸವಣ್ಣ ದೇವಾಲಯದ ಪರೋಹಿತ ಶೇಖರಪ್ಪ, ಗ್ರಾಮದ ಹಿರಿಯ ರೇಣುಕಯ್ಯ ಸ್ಥಳದ ಬಗ್ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು