ಹೊಸಕೋಟೆ: ಭೂತಗ ಕೇಬಲ್ ಅಳವಡಿಕೆಯ ಅವೈಜ್ಞಾನಿಕ ಕಾಮಗಾರಿಯಿಂದ ಕೆಇಬಿ ವೃತ್ತ ಚರಂಡಿಯಾಗಿ ಮಾರ್ಪಟ್ಟಿದೆ.

ಕಾಮಗಾರಿಯಿಂದ ಚರಂಡಿ ವ್ಯವಸ್ಥೆಯಾಗಿ ಧಕ್ಕೆಯಾಗಿದ್ದು, ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ರಸ್ತೆ ಬದಿಯ ಚರಂಡಿಯಲ್ಲಿ ತ್ಯಾಜ್ಯ ಸಂಗ್ರಹವಾಗಿ ಕೊಳಚೆ ಸರಾಗವಾಗಿ ಹರಿಯುದೆ, ರಸ್ತೆಯತ್ತ ನುಗ್ಗುತ್ತಿದೆ. ಇದರಿಂದ ಇಡೀ ವಾತಾವರಣವೇ ಗಬ್ಬುದ್ದು ನಾರುತ್ತಿದೆ. ವಾಹನ ಸವಾರರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ಬಂದಿದೆ.

ಕೆಇಬಿ ಸರ್ಕಲ್ ನಗರದ ಹೃದಯ ಭಾಗದಂತೆ. ಇಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೂ ಅತಿಹೆಚ್ಚಿನ ಸಂಖ್ಯೆಯಲ್ಲಿ ವಾಹನ ಓಡಾಡುತ್ತವೆ. ಜನನಿಬಿಡ ಪ್ರದೇಶವು ಆಗಿದೆ. ಆದರೆ ನಿತ್ಯ ಒಂದಲ್ಲ ಒಂದು ಸಮಸ್ಯೆಗಳು ವಾಹನ ಸವಾರರು ಮತ್ತು ಪಾದಚಾರಿಗಳನ್ನು ಬಾಧಿಸುತ್ತಿದೆ.

ರಸ್ತೆಯಲ್ಲಿ ಚರಂಡಿ ಕೊಳಚೆ ಹರಿಯುತ್ತಿದ್ದರೂ ಸಂಬಂಧಿತ ಅಧಿಕಾರಿಗಳು ಕಂಡು ಕಾಣದಂತೆ ಜಾಣ ಕುರಡುತನ ಪ್ರದರ್ಶಿಸುತ್ತಿದ್ದಾರೆ. ಸಮಸ್ಯೆ ಸರಿಪಡಿಸಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರೆ ಇದು ಹೆದ್ದಾರಿ ಪ್ರಾಧಿಕಾರಕ್ಕೆ ಬರುತ್ತದೆ. ನಗರ ಸಭೆಗೆ ಸೇರುತ್ತೆ, ತಾಲ್ಲೂಕು ಆಡಳಿತ, ಇಲ್ಲವೇ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ ಎಂದು ಒಬ್ಬರತ್ತ ಮತ್ತೊಬ್ಬರು ಕೈ ತೋರುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ವಾಹನ ಸವಾರರು ಹಾಗೂ ಪಾದಚಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಮಳೆ ನೀರೆಂದು ಭಾವಿಸಿ ಸಂಚರಿಸುತ್ತಿದ್ದೇವೆ

ಸಮಸ್ಯೆ ಬಗೆಹರಿಸಿ ಎಂದು ಅಧಿಕಾರಿಗಳ ಮೊರೆ ಹೋದರೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಬೇರೆ ಇಲಾಖೆ ವ್ಯಾಪ್ತಿ ಎಂದು ಎಲ್ಲರೂ ನುಣಚಿಕೊಳ್ಳುತ್ತಿದ್ದಾರೆ. ಹೀಗಾಗಿ ರಸ್ತೆಯಲ್ಲಿ ಹರಿಯುತ್ತಿರುವ ಚರಂಡಿ ಕೊಳಚೆಯನ್ನು ಮಳೆ ನೀರೆಂದು ಭಾವಿಸ ಸಂಚರಿಸುತ್ತಿದ್ದೇವೆ. ಜೊತೆಗೆ ಸಮಸ್ಯೆಗಳಿಗೆ ಹೊಂದಿಕೊಂಡು ಹೋಗುವುದನ್ನು ರೂಢಿಸಿಕೊಂಡಿದ್ದೇವೆ. ಡಾ. ಮುನಿರಾಜು ಹೊಸಕೋಟೆ ನಿವಾಸಿ ಕಾಯಿಲೆ ಹರಡುವ ತಾಣ ಸರ್ಕಾರಿ ಆಸ್ಪತ್ರೆ ಮುಂಭಾಗ ಚರಂಡಿ ಮುಳ್ಳುಕಂಟಿ ಪೊದೆ ಚರಂಡಿ ನೀರು ಹರಡಿಕೊಂಡಿದೆ. ಇದನ್ನು ನೋಡಿದರೆ ರೋಗಿಗಳು ಆಸ್ಪತ್ರೆಗೆ ಕಾಯಿಲೆ ಗುಣಪಡಿಸಿಕೊಳ್ಳಲು ಬರುತ್ತರೋ ಇಲ್ಲವೋ ಕಾಯಿಲೆ ಅಂಟಿಸಿಕೊಂಡು ಹೋಗಲು ಬರುತ್ತರೋ ಎಂಬ ಭಾವನೆ ಮೂಡುತ್ತದೆ. ವರದಾಪುರ ನಾಗರಾಜು ಸಾಮಾಜಿಕ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.