ಗುರುವಾರ , ಜೂನ್ 17, 2021
24 °C

ಆನೆ ಮರಿಗೆ ಸಿದ್ಧಗಂಗಾ ಶ್ರೀಗಳಿಂದ ನಾಮಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆ ಮರಿಯೊಂದಕ್ಕೆ ಸಿದ್ಧಗಂಗಾ ಮಠಾಧೀಶರಾದ ಸಿದ್ಧಲಿಂಗ ಸ್ವಾಮೀಜಿ ಅವರು ಬಸವ ಎಂದು ನಾಮಕರಣ ಮಾಡಿದರು.

ರೂಪಾ ಎಂಬ ಆನೆ ಮರಿಗೆ ಜನಿಸಿದ್ದ ಆರು ತಿಂಗಳ ಆನೆ ಮರಿಗೆ ಸ್ವಾಮೀಜಿ ಬಸವ ಎಂದು ಹೆಸರಿಟ್ಟಿದ್ದಾರೆ. ಬನ್ನೇರುಘಟ್ಟ ಉದ್ಯಾನಕ್ಕೆ ಸಂಜೆ 4ರ ವೇಳೆಗೆ ಆಗಮಿಸಿದ ಸ್ವಾಮೀಜಿ ಉದ್ಯಾನ ವೀಕ್ಷಿಸಿದರು. ಆನೆ ಸಫಾರಿಗೆ ಭೇಟಿ ನೀಡಿ ಮಾವುತರಿಗೆ ಮತ್ತು ಪ್ರಾಣಿಗಳಿಗೆ ಹಣ್ಣುವಿತರಿಸಿದರು.

ಉದ್ಯಾನದ ಕಾರ್ಯನಿರ್ವಹಣಾಧಿಕಾರಿ ವನಶ್ರೀ ವಿಪಿನ್‌ ಸಿಂಗ್‌ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು