ಭಾನುವಾರ, ಮಾರ್ಚ್ 26, 2023
24 °C

ದೊಡ್ಡಬಳ್ಳಾಪುರ: ಲಯನ್ಸ್ ಕ್ಲಬ್‌ನಿಂದ ವಿಶ್ವ ಶಾಂತಿಗಾಗಿ ಚಿತ್ರಕಲಾ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ನಗರದ ಲಯನ್ಸ್ ಕ್ಲಬ್‌ನಿಂದ ವಿಶ್ವ ಶಾಂತಿಗಾಗಿ ನಗರದ ಲಯನ್ಸ್ ಭವನದಲ್ಲಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು.

ಕ್ಲಬ್‍ನ ಜಿಲ್ಲಾ ಪೀಸ್ ಪೋಸ್ಟರ್‌ನ ಡಿ.ಸಿ ಲಯನ್ ಸಾ.ಶ. ಕುಲೋತ್ತುಂಗನ್ ಮಾತನಾಡಿ, ಈ ಜಗತ್ತು ನೆಮ್ಮದಿಯಿಂದ ಬಾಳಬೇಕಾದರೆ ಶಾಂತಿ ಮುಖ್ಯವಾಗಿದೆ. ಮಕ್ಕಳಿಗೆ ಶಾಂತಿ, ಸೌಹಾರ್ದ, ಬಾಂಧವ್ಯದ ಗುಣಗಳನ್ನು ಕಲಿಸಬೇಕಿದೆ ಎಂದರು.

ವಿಶ್ವಶಾಂತಿಗಾಗಿ ಚಿತ್ರಕಲಾ ಸ್ಪರ್ಧೆಯಲ್ಲಿ ನಾವು ಸಂಪರ್ಕ ಹೊಂದಿದ್ದೇವೆ ಎನ್ನುವುದು ಈ ಬಾರಿಯ ಧ್ಯೇಯ ವಾಕ್ಯವಾಗಿದೆ ಎಂದು ಹೇಳಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಜಿ. ಗೋಪಾಲ್ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಕೆ.ವಿ. ಪ್ರಭುಸ್ವಾಮಿ, ಲಯನ್ಸ್ ಕ್ಲಬ್ ಕಾಯದರ್ಶಿ ಕೆ. ಶಿವಶಂಕರ್, ಖಜಾಂಚಿ ಮಂಗಳಗೌರಿ ಪರ್ವತಯ್ಯ, ಸಹ ಕಾರ್ಯದರ್ಶಿ ರೇಖಾ ವೆಂಕಟೇಶ್, ಪೀಸ್ ಪೋಸ್ಟರ್‌ ಮುಖ್ಯಸ್ಥೆ ರಾಧಿಕಾ ಶ್ರೀನಿವಾಸ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು