ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವನಹಳ್ಳಿ: ಮನೆಯಿಂದಲೇ ಮತ ಹಾಕಿದ ಹಿರಿಯನಾಗರಿಕರು, ಅಂಗವಿಕಲರು

Published 13 ಏಪ್ರಿಲ್ 2024, 13:44 IST
Last Updated 13 ಏಪ್ರಿಲ್ 2024, 13:44 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಪಟ್ಟಣದಲ್ಲಿ ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಸೇರಿ 13 ಮಂದಿ ಮತದಾರರು ಶನಿವಾರ ತಮ್ಮ ಮನೆಯಿಂದ ಮತದಾನ ಮಾಡಿದರು.

ಮತಗಟ್ಟೆ ಅಧಿಕಾರಿ ಸತೀಶ್ ಕುಮಾರ್, ಮತಗಟ್ಟೆ ಸಹಾಯಕ ಅಧಿಕಾರಿ ಪ್ರವೀಣ್ ಕುಮಾರ್, ವೀಕ್ಷಕ ಉಮೇಶ್, ಸೆಕ್ಟರ್ ಅಧಿಕಾರಿಗಳಾದ ಎಸ್.ಪೂಜಿತ. ಚಂದ್ರಶೇಖರ್, ಆದರ್ಶ್, ಸೇರಿದಂತೆ ಪೊಲೀಸ್ ಸಿಬ್ಬಂದಿಯೊಂದಿಗೆ ಮತದಾರರ ಮನೆಗಳಿಗೆ ತೆರಳಿ, ಮತದಾರರಿಂದ ಘೋಷಣಾ ಪತ್ರಕ್ಕೆ ಸಹಿ ಮಾಡಿಕೊಂಡು, ನಂತರ ಬ್ಯಾಲೆಟ್ ನಲ್ಲಿ ಗುಪ್ತವಾಗಿ ಮತದಾನ ಮಾಡಿಸಿದರು.

ಮತದಾನ ಸಂಪೂರ್ಣ ಪ್ರಕ್ರಿಯೆಯನ್ನು ಚಿತ್ರೀಕರಣ ಮಾಡಿಸಿದರು. ಮತಪತ್ರವನ್ನು ಲಕೋಟೆಯಲ್ಲಿಟ್ಟು, ಅಂಟಿಸಿದ ನಂತರ ಮತಪೆಟ್ಟಿಗೆಯಲ್ಲಿ ಹಾಕಿಸಿದರು. ಒಂಭತ್ತು ಮಂದಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ನಾಲ್ವರು ಅಂಗವಿಕಲರು ಮತದಾನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT