ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧಿಕಾರಿ ಭರವಸೆ: ಉಪವಾಸ ಕೈಬಿಟ್ಟ ರೈತರು

Last Updated 8 ಜನವರಿ 2020, 13:50 IST
ಅಕ್ಷರ ಗಾತ್ರ

ದೇವನಹಳ್ಳಿ: ಕಳೆದ ಮೂರು ದಿನಗಳಿಂದ ಇಲ್ಲಿನ ಮಿನಿ ವಿಧಾನಸೌಧದ ಮುಂಭಾಗ ರೈತರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಅಂತ್ಯಗೊಂಡಿತು. ಉಪವಾಸನಿರತ ರೈತರನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ರೈತರ ಸಮಸ್ಯೆ ಆಲಿಸಿ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಮಾಹಿತಿ ನೀಡಿದ ರೈತ ಧನಂಜಯ, ಸ.ನಂ134ರಲ್ಲಿ 133ರೈತರು ಕಳೆದ ಅರವತ್ತು ವರ್ಷಗಳಿಂದ ಸಾಗುವಳಿ ಪತ್ರ ಪಡೆದು ಸ್ವಾಧೀನದಲ್ಲಿದ್ದರು. ಕಳೆದ ವರ್ಷ ಈ ಹಿಂದಿನ ಜಿಲ್ಲಾಧಿಕಾರಿ ಕರೀಗೌಡ ನ್ಯಾಯಾಲಯದ ಸಂಕೀರ್ಣಕ್ಕಾಗಿ 3.20ಎಕರೆ ‌ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆದಿದ್ದಾರೆ. ಬೊಮ್ಮವಾರ ಗ್ರಾಮದಲ್ಲಿ ಈ ಹಿಂದೆಯೇ ಸರ್ಕಾರ 8ಎಕರೆ ಭೂಮಿ ಮಂಜೂರು ಮಾಡಿದೆ ಎಂದು ವಿವರಿಸಿದರು.

ಕಂದಾಯ ಇಲಾಖೆ ನಿಯಮದ ಅನ್ವಯ ಅರ್ಹರಿಗೆ ಎಂದು ತಹಶೀಲ್ದಾರ್ ಸಾಗುವಳಿ ಪತ್ರ ನೀಡಿದ್ದಾರೆ. ಕೆಲವೊಂದು ತಿದ್ದುಪಡಿಗಾಗಿ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣಗಳಿವೆ ಎಂದು ಹೇಳಿದರು. ನ್ಯಾಯಾಲಯದಲ್ಲಿ ಪ್ರಕರಣಗಳಿದ್ದರೂ ರೈತರ ದಾಖಲೆ ಪರಿಶೀಲಿಸದೆ ಒಂದೇ ತಿಂಗಳಿಗೆ ನಾಲ್ಕೈದು ನೋಟಿಸ್ ನೀಡಿ ಸಾಗುವಳಿ ಪತ್ರ ರದ್ದುಗೊಳಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ಸ.ನಂ.134ರ ಜಮೀನಿಗೆ ಸಂಬಂಧಿಸಿದಂತೆ ಎಷ್ಟು ರೈತರಿಗೆ ಸಾಗುವಳಿ ಪತ್ರ ನೀಡಲಾಗಿದೆ ಎಂಬುದರ ಬಗ್ಗೆ ಪೂರಕ ದಾಖಲೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು. 36ವರ್ಷಗಳ ದಾಖಲೆಗಳನ್ನು ಮೂರು ದಿನಗಳಲ್ಲಿ ಪರಿಶೀಲಿಸಲು ಆಗುವುದಿಲ್ಲ. 30ದಿನ ಕಾಲಾವಕಾಶಬೇಕು. ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ ನಂತರ ರೈತರು ಸತ್ಯಾಗ್ರಹ ಕೈಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT