ವಿಜಯಪುರ(ದೇವನಹಳ್ಳಿ): ಕಳೆದ 15 ದಿನಗಳ ಹಿಂದೆ ಮೋಡ ಮುಸುಕಿದ ವಾತಾವರಣ ಹಾಗೂ ಫೆಂಜಲ್ ಚಂಡಮಾರುತದ ಮಳೆಯಿಂದಾಗಿ ರೇಷ್ಮೆಗೂಡು ನೂಲು ಬಿಚ್ಚಾಣಿಕೆಯಾಗದೆ ಪೂರೈಕೆ ಕುಸಿದ ಪರಿಣಾಮ ರೇಷ್ಮೆಗೂಡಿನ ಬೆಲೆ ಬುಧವಾರ ₹600ರ ಗಡಿ ದಾಟಿದೆ. ಇದು ರೇಷ್ಮೆ ಬೆಳೆಗಾರರಲ್ಲಿ ಸಂತಸ ಮೂಡಿಸಿದೆ.

ಮೋಡ ಮುಸುಕಿದ ವಾತಾವರಣದಿಂದಾಗಿ ಸರಿಯಾಗಿ ನೂಲು ಬಿಚ್ಚಾಣಿಕೆ ಆಗುವುದಿಲ್ಲ ಎಂಬ ಕಾರಣಕ್ಕೆ ನೂಲು ಬಿಚ್ಚಾಣಿಕೆದಾರರು ಇ-ಹರಾಜಿನಲ್ಲಿ ₹520 ರಿಂದ ₹560ರ ಆಸುಪಾಸಿನಲ್ಲೇ ಧಾರಣೆ ನೀಡುತ್ತಿದ್ದರು. ಕೆಲವರು ಗೂಡು ಸ್ಯಾಂಪಲ್ ತೆಗೆದುಕೊಂಡು ಹೋಗಿ ನೂಲು ಬಿಚ್ಚಾಣಿಕೆಯ ಮಟ್ಟ ಪರಿಶೀಲನೆ ಮಾಡಿಕೊಂಡ ನಂತರ ಬಂದು ಗೂಡಿಗೆ ಬೆಲೆ ನೀಡುತ್ತಾರೆ. ನೂಲು ಬಿಚ್ಚಾಣಿಕೆ ಸರಿಯಾಗಿ ಆಗದಿದ್ದರೆ, ಗೂಡು ವಾಪಸ್ ಹೋಗಬಾರದು ಎನ್ನುವ ಕಾರಣಕ್ಕೆ ಮಾರುಕಟ್ಟೆಯ ಅಧಿಕಾರಿಗಳು ಬಂದು ಬೆಳೆಗಾರ ಮತ್ತು ನೂಲು ಬಿಚ್ಚಾಣಿಕೆದಾರರ ನಡುವೆ ಸಂಧಾನ ಮಾಡಿ ಬೆಳೆಗಾರನ ಒಪ್ಪಿಗೆಯ ಮೇಲೆ ಬೆಲೆ ಕೊಡಿಸುವ ಕೆಲಸ ಮಾಡುತ್ತಾರೆ.

ಇತ್ತಿಚೆಗೆ ತಾಪಮಾನ ಹೆಚ್ಚಾದ ಕಾರಣ ಗುಣಮಟ್ಟದ ಗೂಡು ಮಾರುಕಟ್ಟೆಗೆ ಆವಕವಾಗುತ್ತಿದೆ. ಹಾಗಾಗಿ ಬೆಲೆಯೂ ಜಾಸ್ತಿಯಾಗುತ್ತಿದೆ. ಗರಿಷ್ಠ ಬೆಲೆ ₹650, ಕನಿಷ್ಠ ₹202 ಹಾಗೂ ಸರಾಸರಿ ₹617ಕ್ಕೆ ಹರಾಜಾಗಿದೆ.

‘ವಾತಾವರಣ ಏರುಪೇರಾಗುತ್ತಿದ್ದರೂ ಮಾರುಕಟ್ಟೆಯಲ್ಲಿ ಗೂಡಿಗೆ ಉತ್ತಮ ಬೆಲೆ ಸಿಕ್ಕಿದೆ. ಇಷ್ಟು ಬೆಲೆ ಸಿಗುತ್ತದೆ ಎಂದು ನಾವು ನಿರೀಕ್ಷೆ ಮಾಡಿರಲಿಲ್ಲ’ ಎಂದು ರೈತ ಮುನಿಕೃಷ್ಣಪ್ಪ ಹೇಳಿದರು.

‘ಗುಣಮಟ್ಟದಲ್ಲಿ ಗೂಡು ಬೆಳೆದರೆ ಉತ್ತಮ ಬೆಲೆ ಸಿಗುತ್ತದೆ. ಬಹಳಷ್ಟು ಮಂದಿ ಬೆಳೆಗಾರರು ಗೂಡಿನ ಧಾರಣೆ ಕಡಿಮೆಯಾಗುತ್ತಿದೆ ಎನ್ನುವ ಕಾರಣಕ್ಕೆ ಇತ್ತಿಚೆಗೆ ಹುಳು ಸಾಕಾಣಿಕೆಯಿಂದ ವಿಮುಖರಾಗುತ್ತಿದ್ದಾರೆ. ಹಿಪ್ಪುನೇರಳೆ ತೋಟಗಳನ್ನೂ ಕಿತ್ತು ಹಾಕುತ್ತಿದ್ದಾರೆ. ನಾವು ಉತ್ತಮ ಗುಣಮಟ್ಟದಲ್ಲಿ ಗೂಡು ಬೆಳೆಯಲು ಗಮನಹರಿಸಿದರೆ, ನಮಗೆ ಮೋಸವಾಗಲ್ಲ’ ಎಂದರು.

ಮಾರುಕಟ್ಟೆಗೆ ಬರುವ ಗೂಡಿನ ಆವಕ ಕಡಿಮೆ

ರೇಷ್ಮೆ ಬೆಳೆಗಾರರು ತಾವು ಬೆಳೆದ ಗೂಡನ್ನು ಮಾರುಕಟ್ಟೆಗೆ ತರುವ ಬದಲಿಗೆ ಮನೆಗಳ ಬಳಿಗೆ ಬರುವ ನೂಲು ಬಿಚ್ಚಾಣಿಕೆದಾರರಿಗೆ ಮಾರಾಟ ಮಾಡುತ್ತಾರೆ. ಇದರಿಂದ ಸರ್ಕಾರಕ್ಕೆ ಸಂದಾಯವಾಗಬೇಕಾಗಿದ್ದ ತೆರಿಗೆ ಹಣ ಸಂದಾಯವಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ಸರಾಸರಿ ಹರಾಜಾಗಿರುವ ಬೆಲೆಗಿಂತ ₹20 ಹೆಚ್ಚಿನ ಬೆಲೆ ಕೊಡುತ್ತಾರೆ. ಕೆಲವರು 15 ದಿನಗಳಿಗೆ ಹಣ ಕೊಡ್ತಾರೆ. ಕೆಲವರು ಒಂದು ತಿಂಗಳಿಗೆ ಹಣ ಕೊಡುತ್ತಾರೆ. ನಮಗೆ ಬಂಡವಾಳಕ್ಕೂ ಮುಂಗಡವಾಗಿ ಹಣ ಕೊಡುತ್ತಾರೆ ಎಂದು ರೈತ ಸುರೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.