ದೊಡ್ಡಬಳ್ಳಾಪುರ: ನಗರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಟೆಕ್ ಅವಿಷ್ಕಾರ್-2025-26 ಅಂತರ ಸಾಂಸ್ಥಿಕ ಯೋಜನಾ ಪ್ರದರ್ಶನ ನಡೆಯಿತು.

ಆರು ವಿಭಾಗಗಳಲ್ಲಿ ನಡೆದ ಈ ಪ್ರದರ್ಶನದಲ್ಲಿ ಅಂತಿಮ ವರ್ಷದ ಮತ್ತು ಅಂತಿಮ ವರ್ಷದ ಪೂರ್ವ ವರ್ಷದ ವಿದ್ಯಾರ್ಥಿಗಳು ವಿವಿಧ ಮಾದರಿಗಳನ್ನು ಪ್ರದರ್ಶಿಸಿ, ಗಮನ ಸೆಳೆದರು.

ಸಂಸ್ಥೆಯ ಶೈಕ್ಷಣಿಕ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಗುಣಮಟ್ಟ ನಿರ್ದೇಶಕ ಡಾ.ಎಂ.ಶ್ರೀನಿವಾಸರೆಡ್ಡಿ ಮಾತನಾಡಿ, ಜಗತ್ತು ನಿತ್ಯ ಹೊಸ ಆವಿಷ್ಕಾರಗಳನ್ನು ಬಯಸುತ್ತಿದ್ದು, ಸೃಜನಶೀಲ ಚಟುವಟಿಕೆಗಳಿಗೆ ಸದಾ ಉತ್ತೇಜನವಿದೆ. ಜಾಗತಿಕವಾಗಿ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳು ಇದಕ್ಕೆ ಸಜ್ಜುಗೊಳ್ಳಬೇಕಿದೆ. ಹೊಸ ಸಂಶೋಧನೆ ಹಾಗೂ ಆಲೋಚನೆಗಳಿಗೆ ಸದಾ ಮನ್ನಣೆ ದೊರೆಯಲಿದೆ ಎಂದರು.

ಕಾರ್ಯಕ್ರಮ ಕುರಿತು ಮಾಹಿತಿ ನೀಡಿದ ಕಾರ್ಯಕ್ರಮ ಸಂಚಾಲಕಿ ಡಿ.ಎ. ವೈಷ್ಣವಿ, ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸೇರಿದಂತೆ ವಿವಿಧ ವಿಭಾಗಗಳಿಂದ 94 ತಂಡಗಳು ಭಾಗವಹಿಸಿದ್ದವು. ಎಲ್ಲಾ ವಿಭಾಗಗಳಲ್ಲಿನ ಶ್ರೇಷ್ಠತೆ ಗುರುತಿಸಿ ಕಲಿಕೆ, ಸಹಭಾಗಿತ್ವ, ಉದ್ಯೋಗ ಕೌಶಲ್ಯ ಮತ್ತು ನಾವೀನ್ಯತೆಯ 14 ಅತ್ಯುತ್ತಮ ಪ್ರಯೋಗಗಳನ್ನು ಗುರುತಿಸಲಾಗಿದೆ ಎಂದರು.

ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಪಿ.ವಿಜಯಕಾರ್ತಿಕ್, ಉಪಪ್ರಾಂಶುಪಾಲ ಕೆ.ಎಂ.ಶಿವಪ್ರಸಾದ್, ಮಾನವ ಸಂಪನ್ಮೂಲ ಅಭಿವೃದ್ಧಿ ಮುಖ್ಯಸ್ಥ ಎನ್.ಎಸ್.ಬಾಬುರೆಡ್ಡಿ, ಡಾ.ಎನ್.ಬಿ. ಶಂಕರ್, ಡಾ.ಜೆ. ಕುಮಾರಸ್ವಾಮಿ, ಡಾ.ಎಸ್.ಹರೀಶ್, ಡಾ.ಎಂ.ಶ್ರೀನಿವಾಸರೆಡ್ಡಿ, ಇಲಿಯಾಜ್ ಪಾಷಾ, ಡಾ.ಎಂ.ಎಸ್. ಮೃತ್ಯುಂಜಯ, ಡಾ. ಕೆ.ಆರ್.ವರಲಕ್ಷ್ಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.