ದೇವನಹಳ್ಳಿ/ವಿಜಯಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಸಮಯಪ್ರಜ್ಞೆಯಿಂದಾಗಿ ದೇವನಹಳ್ಳಿಯ ಆಕಾಶ್ ಆಸ್ಪತ್ರೆಯಲ್ಲಿ ದಾಖಲಾಗಿರುವ 320 ಮಂದಿ ಕೊರೊನಾ ಸೋಂಕಿತರ ಜೀವ ಉಳಿದಿದೆ.

ಆಕಾಶ್ ಆಸ್ಪತ್ರೆಯಲ್ಲಿ 320 ಮಂದಿ ಕೊರೊನಾ ಸೋಂಕಿತರು ದಾಖಲಾಗಿದ್ದಾರೆ. ಮಂಗಳವಾರ ಅವರಿಗೆ ಆಮ್ಲಜನಕದ ಕೊರತೆ ಇತ್ತು. ಆಸ್ಪತ್ರೆಯವರು ಆಮ್ಲಜನಕ ಪೂರೈಕೆ ಮಾಡುವಂತೆಜಿಲ್ಲಾಡಳಿತಕ್ಕೆ ಮಾಹಿತಿ ರವಾನೆ ಮಾಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತವಾದ ಜಿಲ್ಲಾಡಳಿತ ಹೊಸಕೋಟೆಯ ಪಿಲ್ಲಗುಂಪೆ ಕಾರ್ಖಾನೆ ಪ್ರದೇಶಕ್ಕೆ ಟ್ರಕ್ ಕಳುಹಿಸಿಕೊಟ್ಟಿದೆ. ಆದರೆ ಕೇರಳದಿಂದ ಆಮ್ಲಜನಕ ತುಂಬಿದ ಟ್ರಕ್ ಬರುವುದು ತಡವಾಗಿದ್ದು, ಮಂಗಳವಾರ ರಾತ್ರಿ 9.30ಕ್ಕೆ ಬಂದಿದೆ. ಹಾಗಾಗಿ ಆಮ್ಲಜನಕ ತುಂಬಿಸಿಕೊಂಡು ದೇವನಹಳ್ಳಿಯ ಆಕಾಶ್ ಆಸ್ಪತ್ರೆಗೆ ತಲುಪುವುದು ತಡವಾಗಿದೆ.

ಆಸ್ಪತ್ರೆಯವರು ಕರೆ ಮಾಡಿದಾಗಐನಾಕ್ಸ್ ಪ್ಲಾಂಟ್ನಲ್ಲಿ ಸಿಬ್ಬಂದಿ ಸ್ಪಂದಿಸಲಿಲ್ಲ. ತಕ್ಷಣ ಆಸ್ಪತ್ರೆಯವರು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ.

ಎಚ್ಚರಗೊಂಡ ಜಿಲ್ಲಾಧಿಕಾರಿ ಅವರು, ಕೂಡಲೇ ಐನಾಕ್ಸ್ ಪ್ಲಾಂಟ್ ವ್ಯವಸ್ಥಾಪಕರಿಗೆ ಕರೆಮಾಡಿದಾಗ, ಮೊಬೈಲ್ ಸ್ವಿಚ್ ಆಫ್ ಆಗಿದೆದೆ. ಟ್ರಕ್ ಚಾಲಕನ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿದೆ. ನಂತರ ಹೊಸಕೋಟೆ, ನಂದಗುಡಿ, ಹಾಗೂ ತಿರುಮಶೆಟ್ಟಿಹಳ್ಳಿ ಠಾಣೆಗಳಿಗೆ ಮಾಹಿತಿ ನೀಡಿದ್ದಾರೆ. ಮೂರು ಮಂದಿ ಪೊಲೀಸ್ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ, ಆಮ್ಲಜನಕ ತುಂಬಿಸಲುನೆರವಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.