ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಕಳ್ಳರ ಕೈಚಳಕ, ಇ-ಕಾರ್ಟ್ ಕಚೇರಿಯಲ್ಲಿ ₹8 ಲಕ್ಷ ದೋಚ ಪರಾರಿ

Published 21 ಮೇ 2024, 5:30 IST
Last Updated 21 ಮೇ 2024, 5:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದ ಕೋರ್ಟ್ ರಸ್ತೆಯ ಸಮೀಪದಲ್ಲಿ ಇ-ಕಾರ್ಟ್ ಕಚೇರಿಯಲ್ಲಿ ಭಾನುವಾರ ರಾತ್ರಿ ಕಳ್ಳತನ ನಡೆದಿದ್ದು ಸುಮಾರು ₹ 8 ಲಕ್ಷ ದೋಚಲಾಗಿದೆ.

ಭಾನುವಾರ ರಾತ್ರಿ 2 ರಿಂದ 2.30ರ ನಡುವೆ ಕಳ್ಳತನ ಪ್ರಕರಣ ನಡೆದಿದೆ ಎನ್ನಲಾಗಿದ್ದು, ಬಾಗಿಲು‌ ಮೀಟಿರುವ ಕಳ್ಳರು ಲಾಕರ್‌ನಲ್ಲಿ ಇಡಲಾಗಿದ್ದ ನಗದನ್ನು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳವು ನಡೆದಿರುವ ಸ್ಥಳಕ್ಕೆ ಶ್ವಾನ ದಳ ಮತ್ತು ಬೆರಳಚ್ಚು ತಂತ್ರಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳ್ಳರ ಜಾಡನ್ನು ಬೆನ್ನತ್ತಿದ ಶ್ವಾನ ದೊಡ್ಡಬಳ್ಳಾಪುರ ನಗರಸಭೆ ಕಚೇರಿ ರಸ್ತೆಯವರೆಗೂ ತೆರಳಿ ಮುಂದಕ್ಕೆ ಯಾವುದೇ ಗುರುತು ಪತ್ತೆಯಾಗದೆ ಹಿಂದಕ್ಕೆ ಮರಳಿವೆ.

ಲಾಕರ್ ಬೀಗ ತೆಗೆದು, ಪಾಸ್‌ವರ್ಡ್‌ ಬಳಸಿ ಹಣ ದೋಚಿರುವುದರಿಂದ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದವರೇ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT