ದೇವನಹಳ್ಳಿ: ವಿದ್ಯುತ್ ಮಾರ್ಗಕ್ಕೆ ಆಡಚಣೆ ನೆಪದಲ್ಲಿ ಬುಡ ಸಮೇತ ಮರಗಳ ಹನನಕ್ಕೆ ಮುಂದಾಗಿರುವ ಬೆಸ್ಕಾಂ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುರಸಭೆ ಮಾಜಿ ಸದಸ್ಯ ಆರ್.ಕುಮಾರ್ ಮಾತನಾಡಿ, ವೆಂಕಟಪ್ಪ ಬಡಾವನೆಯಲ್ಲಿ ಸಮೃದ್ಧವಾಗಿ ಬೆಳೆದಿರುವ ಮರಗಳನ್ನು ಬುಡದಿಂದ ಒಂದರೆಡು ಅಡಿ ಬಿಟ್ಟು ಸಂಪೂರ್ಣವಾಗಿ ಮಟ್ಟ ಹಾಕಲಾಗಿದೆ. ಕಷ್ಟಪಟ್ಟು ಬೆಳೆಸಿದ ಮರಗಳನ್ನು ಕಟಾವು ಮಾಡಲು ಅನುಮತಿ ನೀಡಿದವರು ಯಾರು ಎಂದು ಪ್ರಶ್ನಿಸಿದರು. ಬೆಸ್ಕಾಂ ಅಧಿಕಾರಿಗಳು ಮುಂಗಾರು ಆರಂಭಕ್ಕೆ ಮೊದಲು ಎಲ್ಲಾ ಲೈನ್ ಮೆನ್‌ಗಳನ್ನು ಒಂದೆಡೆ ಸಭೆ ನಡೆಸಿ ಮರಗಳ ರಂಬೆ – ಕಟಾವು ಮಾಹಿತಿ ನೀಡಬೇಕು. ಆದರೆ, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು.

ಪರಿಸರ ರಕ್ಷಣೆ ಎಲ್ಲರ ಕರ್ತವ್ಯ. ಮರ ಕಟಾವು ಮಾಡಿರುವುದು ದುರದೃಷ್ಟಕರ ಬೆಳೆವಣಿಗೆ. ಮರ ಕಟಾವಿಗೆ ಯಾರು ಅನುಮತಿ ನೀಡಿಲ್ಲ. ಈಗಾಗಲೇ ಬೆಸ್ಕಾಂ ಅಧಿಕಾರಿಗಳೊಂದಿಗೆ ಮಾತುಕತೆ ನಡೆದಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ ತಿಳಿಸಿದರು.

ಮುಂದೆ ಈ ರೀತಿಯಾಗದಂತೆ ಸೂಕ್ತ ಕ್ರಮತೆಗೆದುಕೊಳ್ಳಲಾಗುವುದು ಎಂದು ಬೆಸ್ಕಾಂ ಸಹಾಯಕ ಇಂಜಿನಿಯರ್ ಷಡಕ್ಷರಯ್ಯ ಭರವಸೆ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.