ದೇವನಹಳ್ಳಿ: ಬ್ಯಾಂಕಾಕ್ನಿಂದ ಕಳ್ಳಸಾಗಣೆ ಮಾಡುತ್ತಿದ್ದ 23 ಕೆ.ಜಿ ಹೈಡ್ರೋಫೋನಿಕ್ ಗಾಂಜಾವನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ವಿಚಕ್ಷಣಾ ದಳದ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ವಶಪಡಿಸಿಕೊಳ್ಳಲಾದ ಗಾಂಜಾದ ಒಟ್ಟು ಮೌಲ್ಯ ₹23 ಕೋಟಿ ಎಂದು ಅಂದಾಜಿಸಲಾಗಿದೆ. ನೀರಿನ ಮೇಲೆ ಬೆಳೆಯುವ ಹೈಡ್ರೋಫೋನಿಕ್ ಗಾಂಜಾ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆ.ಜಿಗೆ ಒಂದು ಕೋಟಿ ರೂಪಾಯಿ ಬೆಲೆ ಬಾಳುತ್ತದೆ.

ಕಳೆದ ಗುರುವಾರ (ಜ.9) ತಡರಾತ್ರಿ ಬ್ಯಾಂಕಾಕ್ನಿಂದ ಬಂದಿಳಿದ ಮೂವರು ಥಾಯ್ಲೆಂಡ್ ಪ್ರಯಾಣಿಕರನ್ನು ತಪಾಸಣೆ ನಡೆಸಿದಾಗ ಗಾಂಜಾ ಸೇರಿದಂತೆ ವಿವಿಧ ಬಗೆಯ ಮಾದಕ ವಸ್ತುಗಳು ಪತ್ತೆಯಾಗಿವೆ.

ಹೈಡ್ರೋಫೋನಿಕ್ ಗಾಂಜಾ ಬೀಜ ಮತ್ತು ಮೈರವಾನ್ ಗಾಂಜಾ ಹೂವು ಸೇರಿದಂತೆ ವಿವಿಧ ಬಗೆಯ ಗಾಂಜಾವನ್ನು ಲಗೇಜ್ ಬ್ಯಾಗ್ಗಳಲ್ಲಿ ಬಚ್ಚಿಟ್ಟು ತರಲಾಗಿತ್ತು. ಬ್ಯಾಂಕಾಕ್ನಿಂದ ಬೆಂಗಳೂರಿಗೆ ಗಾಂಜಾ ಕಳ್ಳಸಾಗಣೆ ಕುರಿತು ಕಸ್ಟಮ್ಸ್ ವಿಚಕ್ಷಣಾ ದಳದ ಸಿಬ್ಬಂದಿಗೆ ಖಚಿತ ಸುಳಿವು ದೊರೆತಿತ್ತು.

ಮೂವರೂ ಥಾಯ್ಲೆಂಡ್ ಪ್ರಜೆಗಳಾಗಿದ್ದು, ಅವರನ್ನು ಬಂಧಿಸಿ ಮಾದಕ ವಸ್ತುಗಳ ನಿಯಂತ್ರಣ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಕಸ್ಟಮ್ಸ್ ವಿಚಕ್ಷಣ ದಳದ ಸಿಬ್ಬಂದಿ ಆರೋಪಿಗಳನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.