ಮಾರುಕಟ್ಟೆ ವ್ಯವಸ್ಥೆಗೆ ಕ್ರಮ
ಇತ್ತೀಚೆಗೆ ಹಾಲು ಉತ್ಪಾದನೆಯಲ್ಲಿ ಏರಿಕೆಯಾಗುತ್ತಿದ್ದು ಮಾರುಕಟ್ಟೆ ಕಷ್ಟವಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ರೈತರು ದುಪ್ಪಟ್ಟು ಹಾಲು ಉತ್ಪಾದನೆ ಮಾಡಿ ಆರ್ಥಿಕವಾಗಿ ಸಬಲರಾಗಬೇಕು. ಅದಕ್ಕೆ ಬೇಕಾದ ಎಲ್ಲಾ ಕ್ರಮಗಳಿಗೆ ಮುಂದಾಗಿ ಎಂದು ಡಿ.ಕೆ.ಸುರೇಶ್ ಅಧಿಕಾರಿಗಳಿಗೆ ಸೂಚಿಸಿದರು. ಹೈನುಗಾರಿಕೆ ಅಭಿವೃದ್ಧಿಗೊಳಿಸಿ ಹಿಂದಿನ ಕಾಲದಲ್ಲಿ ಯಾರ ಮನೆಯಲ್ಲಿ ಹೆಚ್ಚಿನ ದನಗಳು ಜಿರಾಯ್ತಿ ಇರುತ್ತಿತ್ತೋ ಅಂತಹ ಮನೆಗಳನ್ನು ಹುಡುಕಿ ಹೆಣ್ಣು ಕೊಡುತ್ತಿದ್ದರು. ಆದರೆ ಇಂದು ಹೈನುಗಾರಿಕೆ ಕೃಷಿ ಎಂದರೆ ಹೆಣ್ಣು ಕೊಡಲು ಹಿಂದುಮುಂದು ನೋಡುತ್ತಿದ್ದಾರೆ. ಅದನ್ನು ಹೋಗಲಾಡಿಸಿ ರೈತರು ಯಾವುದೇ ಅಧಿಕಾರಿ ದೊಡ್ಡ ಹುದ್ದೆಗಿಂತ ಕಡಿಮೆ ಇಲ್ಲ ಎಂಬಂತೆ ಹೈನುಗಾರಿಕೆ ಅಭಿವೃದ್ಧಿಗೊಳಿಸಬೇಕಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.