ವಿಜಯಪುರ (ದೇವನಹಳ್ಳಿ): ಹೆಂಗೆಳೆಯರ ನೆಚ್ಚಿನ ವರಮಹಾಲಕ್ಷ್ಮಿ ಹಬ್ಬಕ್ಕೆ ಎಲ್ಲಡೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಮನೆಯಲ್ಲೇ ಸ್ವಚ್ಛಗೊಳಿಸಿರುವ ಮಹಿಳೆಯರು ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಹಬ್ಬದ ಹಿನ್ನೆಲೆಯಲ್ಲಿ ಸಾಮಗ್ರಿ ಖರೀದಿಸಲು ಬುಧವಾರವೇ ಮಾರುಕಟ್ಟೆಗೆ ಮಹಿಳೆಯರು ದಾಂಗುಡಿ ಇಟ್ಟಿದ್ದು, ಖರೀದಿ ಭರಾಟೆ ಜೋರಾಗಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಹೂ, ತರಕಾರಿ, ಹಣ್ಣುಗಳ ಬೆಲೆಯಲ್ಲಿ ಏರಿಕೆ ಕಂಡರೂ ಗ್ರಾಹಕರ ಖರೀದಿಗೆ ಕೊರತೆ ಇಲ್ಲ. ಇನ್ನೂ ಕಳೆದ ವಾರಕ್ಕೆ ಹೋಲಿಸಿದರೆ ಹೂ, ತರಕಾರಿ, ಹಣ್ಣುಗಳ ಬೆಲೆ ಗಗನಕ್ಕೆರಿರುವುದು ಗ್ರಾಹಕರ ಕೈ ಸುಡುವಂತೆ ಮಾಡಿದೆ.

ಪಟ್ಟಣದ ಹಲವಡೆ ಬೀದಿ ಬದಿಗಳಲ್ಲಿ ಬುಧವಾರ ವ್ಯಾಪಾರದ ಭರಾಟೆ ಜೋರಾಗಿಯೇ ನಡೆಯಿತು. ಗಾಂಧಿಚೌಕ, ಹಳೆ ಸರ್ಕಾರಿ ಆಸ್ಪತ್ರೆ ಮುಂಭಾಗ, ಬಸ್ ನಿಲ್ದಾಣದ ಇಕ್ಕೆಲಗಳಲ್ಲಿ ಸೇರಿದಂತೆ ಹಲವೆಡೆ ಜನರು ಹಬ್ಬಕ್ಕೆ ಸಾಮಗ್ರಿ ಖರೀದಿಸಲು ಮುಗಿಬಿದ್ದರು.

ಮೂರ್ತಿ ಖರೀದಿ: ಗಾಂಧಿಚೌಕ, ವೆಂಕಟರಮಣಸ್ವಾಮಿ ದೇವಾಲಯದ ರಸ್ತೆಯಲ್ಲಿ ವರಲಕ್ಷ್ಮಿ ಪೂಜೆಗೆ ಅವಶ್ಯ ಇರುವ ಮಹಾಲಕ್ಷ್ಮಿ ಆಕರ್ಷಕ ಮೂರ್ತಿಗಳು ಜನರನ್ನು ಸೆಳೆಯುತ್ತಿದ್ದವು. ಮೂರ್ತಿಗಳು ಮಣ್ಣಿನ ಮೂರ್ತಿ ₹200 ವರೆಗೆ ಮಾರಾಟವಾಗುತ್ತಿದ್ದವು.

ಸಸಿಗಳ ಮಾರಾಟ: ಪಟ್ಟಣದ ಶಿವಸರ್ಕಲ್ ಬಳಿ ವರಮಹಾಲಕ್ಷೀಯ ಮೂರ್ತಿ ಸುತ್ತ ಅಲಂಕಾರಕ್ಕೆ ನರ್ಸರಿಗಳಿಂದ ಸಾವಿರಾರು ಸಸಿಗಳನ್ನು ಮಾಲೀಕರು ತಂದು ಮಾರಾಟ ಮಾಡುತ್ತಿದ್ದರು. ಗ್ರಾಹಕರು ಹೂವಿನ ಸಸಿಗಳನ್ನು ಖರೀದಿಸುತ್ತಿದ್ದ ದೃಶ್ಯ ಕಂಡು ಬಂತು.
ಗ್ರಾಹಕರು ಕೆಲವೊಂದು ಬೇಕರಿಗಳಲ್ಲಿ ಸಿಹಿ ತಿಂಡಿ ಖರೀದಿಸಿದರು.

ಮಹಿಳೆಯರು, ಯುವತಿಯರು ವರಮಹಾಲಕ್ಷ್ಮೀ ಹಬ್ಬಕ್ಕಾಗಿ ಹೊಸ ಸೀರೆ ಬಟ್ಟೆ, ಬಳೆ ತೊಡಗಿಸಿಕೊಳ್ಳುತ್ತಿದ್ದು, ಪೂಜಾ ಸಾಮಗ್ರಿ ಖರೀದಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.