ಜಿಲ್ಲೆಯ ಬಹುತೇಕ ಕಡೆಗಳಲ್ಲಿ ರಾಗಿ ಬೆಳೆ ಕೊಯ್ಲಿಗೆ ಬಂದಿದೆ. ಒಂದೆರೆಡು ದಿನ ಮಳೆ ಸುರಿದಿದೆ. ಮಳೆ ಮುಂದುವರೆದರೆ ರಾಗಿ ಫಸಲು ಕೈ ಸೇರುವುದಿಲ್ಲ
ಪ್ರತೀಶ್ ರೈತ ಮುಖಂಡ
ಈಗ ಕೊಯ್ಲು ಆರಂಭಿಸಬೇಕಿತ್ತು. ಆದರೆ ಮೋಡ ಕವಿದ ವಾತಾವರಣ ಮಳೆ ಕೂಲಿ ಕಾರ್ಮಿಕರ ಅಭಾವದಿಂದ ರಾಗಿ ಬೆಳೆ ಕೊಯ್ಲಿಗೆ ಅಡ್ಡಿಯಾಗಿದೆ.
ಶಿವಣ್ಣ ರಾಗಿ ಬೆಳೆಗಾರ
ಗುಣಮಟ್ಟ ಕುಸಿಯುವ ಆತಂಕ
ಬಹುತೇಕರ ಹೊಲಗಳಲ್ಲಿ ರಾಗಿ ಬೆಳೆ ಸಮೃದ್ಧವಾಗಿ ಬೆಳೆದಿದೆ. ಮಳೆಯಿಂದ ರಾಗಿ ಬೆಳೆ ನೆಲಕ್ಕುರುಳಿ ಹಾನಿಯಾಗುತ್ತಿದೆ. ಇದರಿಂದ ರಾಗಿ ಬೆಳೆಯಲ್ಲಿ ತೇವಾಂಶ ಹೆಚ್ಚಾಗಿ ಗುಣಮಟ್ಟ ಕುಸಿಯಲಿದೆ. ಅಲ್ಲದೇ ಕಪ್ಪು ಬಣ್ಣಕ್ಕೆ ತಿರುಗಿದ ರಾಗಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದೆ ಬೆಲೆ ಕಡಿಮೆಯಾಗುವ ಆತಂಕ ರೈತರಲ್ಲಿದೆ. ಉಂಟಾಗಲಿದೆ ಮೇವಿ ಅಭಾವ? ಗೂ ಹೊಡೆತ: ರಾಗಿ ಹುಲ್ಲು ತಾಳು ಸಂಗ್ರಹಿಸಿ ರೈತರು ವರ್ಷ ಪೂರ್ತಿ ಜಾನುವಾರುಗಳಿಗೆ ಮೇವಿಗೆ ಬಳಕೆ ಮಾಡುತ್ತಾರೆ. ಈಗ ಮಳೆ ಹೆಚ್ಚಾದರೆ ರಾಗಿ ಪೈರು ಕೊಳತು ಮೇವು ಸಿಗದಂತೆ ಆಗಲಿದೆ. ಮುಂದಿನ ದಿನಗಳಲ್ಲಿ ಜಾನುವಾರುಗಳ ಮೇವಿಗೆ ಅಭಾವ ತಲೆದೂರಲಿದೆ ಎನ್ನುತ್ತಾರೆ ಹೈನುಗಾರರು.
ಪುಷ್ಪ ಕೃಷಿಗೂ ಕಂಟಕ
ಬಹುತೇಕ ರೈತರು ಹೂ ಬೆಳೆ ನೆಚ್ಚಿಕೊಂಡಿದ್ದಾರೆ. ಈ ಸಮಯದಲ್ಲಿ ಮಳೆ ಅಧಿಕವಾದರೆ ಹೂವಿನ ಗುಣಮಟ್ಟ ಕುಸಿಯಲಿದ್ದು ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿ ಬೆಲೆ ಕುಸಿತಕ್ಕೆ ಕಾರಣವಾಗಲಿದೆ. ಅಲ್ಲದೇ ವಾತಾವರಣದಲ್ಲಿ ಥಂಡಿ ಹೆಚ್ಚಾದರೆ ರೋಗ ಬಾಧೆಯೂ ಹೆಚ್ಚಲಿದ್ದು ಇದನ್ನು ನಿಯಂತ್ರಿಸಲು ದುಬಾರಿ ವೆಚ್ಚ ಮಾಡಬೇಕಾದ ಅನಿವಾರ್ಯ ಹೂ ಬೆಳೆಗಾರರಿಗೆ ಎದುರಾಗಲಿದೆ.