ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರತಿಭಾ ಕಾರಂಜಿಯಲ್ಲಿ ಚಿಣ್ಣರ ಮಿಂಚು

Published 23 ಆಗಸ್ಟ್ 2024, 14:22 IST
Last Updated 23 ಆಗಸ್ಟ್ 2024, 14:22 IST
ಅಕ್ಷರ ಗಾತ್ರ

ವಿಜಯಪುರ (ದೇವನಹಳ್ಳಿ): ಪಟ್ಟಣದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶುಕ್ರವಾರ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು.

1-7ನೇ ತರಗತಿ 23 ಶಾಲೆಗಳಿಂದ 600ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತಿಭಾ ಕಾರಂಜಿಯಲ್ಲಿ ಧಾರ್ಮಿಕ ಪಠಣ ಸಂಸ್ಕೃತ, ಮತ್ತು ಅರೆಬಿಕ್, ಕಂಠಪಾಠ (ಕನ್ನಡ, ಇಂಗ್ಲೀಷ್, ಹಿಂದಿ, ಸಂಸ್ಕೃತ), ದೇಶಭಕ್ತಿಗೀತೆ, ಪ್ರಬಂಧರಚನೆ, ಕಥೆಹೇಳುವುದು, ಚಿತ್ರಕಲೆ, ಅಭಿನಯಗೀತೆ, ಕ್ಲೆಮಾಡೆಲಿಂಗ್, ಭಕ್ತಿಗೀತೆ, ಆಶುಭಾಷಣ, ಕವನ, ಪದ್ಯವಾಚನ, ಮಿಮಿಕ್ರಿ ಸ್ಪರ್ಧೆಯಲ್ಲಿ ಮಕ್ಕಳು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ವಿವಿಧ ಪ್ರಾಣಿಗಳು, ರಾಷ್ಟ್ರನಾಯಕರ ವೇಷದಲ್ಲಿ ಚಿಣ್ಣರು ಮಿಂಚಿದರು.

ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆ ಮುಖ್ಯಾಧಿಕಾರಿ ಜಿ.ಆರ್.ಸಂತೋಷ್, ಪಠ್ಯಪುಸ್ತಕ ಮಾತ್ರ ಮಕ್ಕಳ ಭವಿಷ್ಯ ರೂಪಿಸುವುದಿಲ್ಲ. ಪಠ್ಯತೇತರ ಚಟುಟವಿಕೆ ಮಕ್ಕಳ ಭವಿಷ್ಯಕ್ಕೆ ಬುನಾದಿ ಹಾಕುತ್ತವೆ. ಅವರ ಪ್ರತಿ‌ಭೆ, ಕೌಶಲವನ್ನು ಗುರುತಿಸಲು ಪ್ರತಿಭಾ ಕಾರಂಜಿ ವೇದಿಕೆಯಾಗಿದೆ ಎಂದರು.

ಪುರಸಭೆ ಸದಸ್ಯ ವಿ.ನಂದಕುಮಾರ್, ಪುರಸಭೆ ಸದಸ್ಯರಾದ ಭವ್ಯಮಹೇಶ್, ಎ.ಆರ್.ಹನೀಪುಲ್ಲಾ, ಎಂ.ರಾಜಣ್ಣ, ಬೈರೇಗೌಡ, ಎಂ.ನಾರಾಯಣಸ್ವಾಮಿ, ಉಪಪ್ರಾಂಶುಪಾಲ ಪಿ.ವೆಂಕಟೇಶ್, ಅಶ್ವಥನಾರಾಯಣ, ರಾಜುಹವಳೇಕರ್, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಸುಧಾ, ಬಿ.ಆರ್.ಪಿ.ಸಮೀರಾ, ಇಸಿಓ ನಾಗಪ್ಪ, ಸಿಆರ್‌ಪಿ ಗಳಾದ ದಿನೇಶ್ ಕುಮಾರ್, ವಿ.ಮುನಿಯಪ್ಪ, ಕೃಷ್ಣರಾಮ್, ಮುಖ್ಯಶಿಕ್ಷಕರಾದ ಸುಭಾಷ್ ಬಿ.ದಾಸರ್, ಮನೋಹರ್, ನಾರಾಯಣಸ್ವಾಮಿ ಇದ್ದರು.

ಡಾ.ಬಿ.ಆರ್.ಅಂಬೇಡ್ಕರ್ ಪೋಷಾಕಿನಲ್ಲಿ ರಾಜೀವ್ ನಗರ ಶಾಲೆಯ 6 ನೇ ತರಗತಿಯ ಎಲ್.ಅಕಿಲ್
ಡಾ.ಬಿ.ಆರ್.ಅಂಬೇಡ್ಕರ್ ಪೋಷಾಕಿನಲ್ಲಿ ರಾಜೀವ್ ನಗರ ಶಾಲೆಯ 6 ನೇ ತರಗತಿಯ ಎಲ್.ಅಕಿಲ್
ಮಹಾಕಾಳಿ ವೇಷಧಾರಿಯಾಗಿ ಭರತ್ ನಗರ ಸರ್ಕಾರಿ ಶಾಲೆಯ 2 ನೇ ತರಗತಿ ವಿದ್ಯಾರ್ಥಿನಿ ಪವಿತ್ರಾ.
ಮಹಾಕಾಳಿ ವೇಷಧಾರಿಯಾಗಿ ಭರತ್ ನಗರ ಸರ್ಕಾರಿ ಶಾಲೆಯ 2 ನೇ ತರಗತಿ ವಿದ್ಯಾರ್ಥಿನಿ ಪವಿತ್ರಾ.
ವೀರಗಾಸೆ ಕುಣಿತ ವೇಷಧಾರಿಯಾಗಿ ರೋಟರಿ ಶಾಲೆಯ 4 ನೇ ತರಗತಿ ವಿದ್ಯಾರ್ಥಿ ಭಾರ್ಗವ್.
ವೀರಗಾಸೆ ಕುಣಿತ ವೇಷಧಾರಿಯಾಗಿ ರೋಟರಿ ಶಾಲೆಯ 4 ನೇ ತರಗತಿ ವಿದ್ಯಾರ್ಥಿ ಭಾರ್ಗವ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT