ಶುಕ್ರವಾರ, ಜೂನ್ 18, 2021
27 °C

‘ಕಟ್ಟಡ ಕಾರ್ಮಿಕರಿಗೆ ₹ 3ಸಾವಿರ ಸಾಲದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕಟ್ಟಡ ಕಾರ್ಮಿಕರಿಗೆ ತಲಾ ₹3,000 ನೀಡಲಾಗುವುದು. ಇದಕ್ಕೆ ₹ 499 ಕೋಟಿ ಖರ್ಚಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಘೋಷಿಸಿರುವುದನ್ನು ಸ್ವಾಗತಿಸುತ್ತೇವೆ. ಆದರೆ, ಈ ಮೊತ್ತ ಸಾಲುವುದಿಲ್ಲ’ ಎಂದು ಇಲ್ಲಿನ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಎನ್.ಆರ್. ಲಾತೂರ ಹೇಳಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ರಾಜ್ಯದಲ್ಲಿ 21 ಲಕ್ಷ ನೋಂದಾಯಿತ ಕಾರ್ಮಿಕರಿದ್ದಾರೆ. ₹ 499 ಕೋಟಿಯಲ್ಲಿ ಎಲ್ಲರಿಗೂ ₹ 3 ಸಾವಿರ ಕೊಡಲಾಗುವುದಿಲ್ಲ. ಇದರಲ್ಲಿ ಸ್ವಲ್ಪ ಮಂದಿಗೆ ಸಿಗುತ್ತದೆ. ಉಳಿದವರಿಗೆ ಸಿಗುವುದಿಲ್ಲ. ಇದು ಗೊಂದಲಕ್ಕೆ ಕಾರಣವಾಗುತ್ತದೆ. ಇದಕ್ಕೆ ಅವಕಾಶ ಕೊಡಬಾರದು. ನೋಂದಾಯಿತರಾದ ಎಲ್ಲರಿಗೂ ಪರಿಹಾರ ಕಲ್ಪಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಕಳೆದ ಬಾರಿ ₹5 ಸಾವಿರ ಪರಿಹಾರ ನೀಡಲಾಗಿತ್ತು. ಆಹಾರದ ಪಾಕೆಟ್‌ಗಳನ್ನು ಕೂಡ ಕೊಡಲಾಗಿತ್ತು. ಈ ಬಾರಿ ಕಿಟ್ ಕೊಟ್ಟಿಲ್ಲ. ಹೀಗಾಗಿ, ತಲಾ ₹ 10ಸಾವಿರ ಪರಿಹಾರ ನೀಡಬೇಕು. ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ₹ 6ಸಾವಿರ ಕೋಟಿ ಲಭ್ಯವಿದೆ. ಇದು ಕಾರ್ಮಿಕರಿಗಾಗಿಯೇ ಇರುವ ಹಣ. ಅದನ್ನು ಬಳಸಿಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು