ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು ಪಂಚಾಯಿತಿ ಎಂಜಿನಿಯರ್‌ ಎಸಿಬಿ ಬಲೆಗೆ

Last Updated 17 ಜೂನ್ 2020, 11:06 IST
ಅಕ್ಷರ ಗಾತ್ರ

ಬೆಳಗಾವಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿಕೊಂಡ ಕೃಷಿ ಹೊಂಡದ ಸಹಾಯಧನದ ಬಿಲ್‌ ಮಂಜೂರಾತಿಗೆ ಬುಧವಾರ ಲಂಚ ಪಡೆಯುತ್ತಿದ್ದ ಅಥಣಿ ತಾಲ್ಲೂಕು ಪಂಚಾಯಿತಿಯ ಎಂಜಿನಿಯರ್‌ ನಾಗಪ್ಪ ಭೀಮಪ್ಪ ಮೊಕಾಶಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಅಥಣಿ ತಾಲ್ಲೂಕಿನ ಅನಂತಪುರದ ಅಂಬರೀಷ ಸೋಮಲಿಂಗ ದುಗ್ಗಾಣಿ ನೀಡಿದ ದೂರಿನ ಮೇಲೆಗೆ ಎಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ‘₹ 6ಸಾವಿರ ಬೇಡಿಕೆ ಇಟ್ಟಿದ್ದ ನಾಗಪ್ಪ ಮುಂಗಡವಾಗಿ ₹ 3ಸಾವಿರ ಪಡೆದಿದ್ದರು. ಉಳಿದ ₹ 3ಸಾವಿರ ಪಡೆಯುವಾಗ ಅವರು ಸಿಕ್ಕಿಬಿದ್ದಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ. ಲಂಚವಾಗಿ ಪಡೆದ ಹಣವನ್ನು ಅವರಿಂದ ವಸೂಲಿ ಮಾಡಲಾಗಿದ್ದು, ತನಿಖೆ ಮುಂದುವರಿದಿದೆ’ ಎಂದು ಎಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಡಿಎಸ್‌ಪಿ ಶರಣಪ್ಪ ಹಾಗೂ ಇನ್‌ಸ್ಪೆಕ್ಟರ್‌ ಎ.ಎಸ್. ಗುದಿಗೊಪ್ಪ, ಸುನೀಲ್‌ಕುಮಾರ್‌ ನೇತೃತ್ವದಲ್ಲಿ ದಾಳಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT