ಸೋಮವಾರ, ಫೆಬ್ರವರಿ 17, 2020
29 °C

ಸಾಮರ್ಥ್ಯ ಪ್ರದರ್ಶನದ ಅವಕಾಶ ಅನ್ವೇಷಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಪ್ರತಿಯೊಬ್ಬರಲ್ಲೂ ಸಾಮರ್ಥ್ಯ ಇರುತ್ತದೆ. ಅದನ್ನು ಪ್ರದರ್ಶಿಸುವ ಅವಕಾಶಗಳನ್ನು ಅನ್ವೇಷಿಸಿಕೊಳ್ಳಬೇಕು’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಸವರಾಜ ಪದ್ಮಸಾಲಿ ಹೇಳಿದರು.

ಇಲ್ಲಿನ ಹಿಂದವಾಡಿಯ ಕರ್ನಾಟಕ ಲಾ ಸೊಸೈಟಿಯ ಐಎಂಇಆರ್‌ನಲ್ಲಿ ಪಠ್ಯೇತರ, ಸಹಪಠ್ಯ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಸಾಧನೆಗಾಗಿ ಸೋಮವಾರ ನಡೆದ ಸಾಧಕರ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಡಿಜಿಟಲ್ ಜ್ಞಾನವು ತಾತ್ಕಾಲಿಕ. ಆದರೆ ಪುಸ್ತಕಗಳನ್ನು ಓದುವುದರಿಂದ ಮತ್ತು ಶಿಕ್ಷಕರೊಂದಿಗೆ ವೈಯಕ್ತಿಕ ಸಂವಹನ ನಡೆಸುವುದರಿಂದ ಹೆಚ್ಚಿನ ಪ್ರಯೋಜನವಿದೆ’ ಎಂದು ತಿಳಿಸಿದರು.

ಕೆಎಲ್‌ಎಸ್ ಐಎಂಇಆರ್ ಜಿಸಿ ಅಧ್ಯಕ್ಷ ಆರ್.ಎಸ್. ಮುತಾಲಿಕ್ ದೇಸಾಯಿ, ‘ಸಾಧನೆ ಜೀವನದುದ್ದಕ್ಕೂ ಮುಂದುವರಿಯಬೇಕು. ಪ್ರಶಸ್ತಿ ಪಡೆಯುವುದು ಪ್ರಾರಂಭವೇ ಹೊರತು ಅಂತ್ಯವಲ್ಲ. ನೈತಿಕ ಮೌಲ್ಯಗಳನ್ನು ಅನುಸರಿಸುವ ಮೂಲಕ ಸಮಾಜ ಮತ್ತು ಕುಟುಂಬದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿ ಮಾದರಿಯಾಗಬೇಕು’ ಎಂದು ಸಲಹೆ ನೀಡಿದರು.

ನಿರ್ದೇಶಕ ಡಾ.ಅತುಲ್ ಆರ್. ದೇಶಪಾಂಡೆ ಸ್ವಾಗತಿಸಿದರು. ರಿತಿಕಾ ಮತ್ತು ಐಶ್ವರ್ಯಾ ನಿರೂಪಿಸಿದರು. ಗಾಂಧಾಲಿ ಮತ್ತು ಭಾಗ್ಯಶ್ರೀ ಪರಿಚಿಯಿಸಿದರು. ಪ್ರೊ.ಶ್ರೀರಂಗ್ ದೇಶಪಾಂಡೆ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು