‘ಹಿಂಡಲಗಾ ಜೈಲಿನಲ್ಲಿರುವ ಕೊಲೆ ಅಪರಾಧಿ ಜಯೇಶ್ ಪೂಜಾರಿ ಉರೂಫ್ ಶಾಕೀರ್ ಮೊಹಮ್ಮದ್, 2023ರ ಜನವರಿ ಹಾಗೂ ಮಾರ್ಚ್‌ನಲ್ಲಿ ಗಡ್ಕರಿ ಅವರ ನಾಗ್ಪುರದ ಕಚೇರಿಗೆ ಬೆದರಿಕೆ ಕರೆ ಮಾಡಿದ್ದ. ತಾನು ದಾವೂದ್ ಇಬ್ರಾಹಿಂನ ಸಹಚರ, ತನಗೆ ₹ 100 ಕೋಟಿ ಕೊಡದಿದ್ದರೆ ಬಾಂಬ್ ಸ್ಫೋಟಿಸಿ ಸಚಿವರನ್ನು ಹತ್ಯೆ ಮಾಡುವೆ ಎಂದು ಹೇಳಿದ್ದ. ಜಯೇಶ್‌ನ ಜತೆಗಿದ್ದ ಅಕ್ಬರ್ ಪಾಷಾನೇ ಈ ದೂರವಾಣಿ ಕರೆಯ ಸೂತ್ರಧಾರ ಎಂದು ಪೊಲೀಸರಿಗೆ ಗೊತ್ತಾಗಿತ್ತು. ವಿಚಾರಣೆಗಾಗಿ ನಾಗ್ಪುರ ಪೊಲೀಸರು ಅಕ್ಬರ್ ಪಾಷಾನನ್ನು ಕರೆದೊಯ್ದಿದ್ದರು’ ಎಂದು ಮೂಲಗಳು ತಿಳಿಸಿವೆ.