ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಲಗಿ | ‘ಮೊರಾರ್ಜಿ ಶಾಲೆಗಳಲ್ಲಿ ಪದವಿಗೂ ಅವಕಾಶ’

 ಅಲ್ಲಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಡಾ. ಅಬ್ದುಲ್‌ರಶೀದ್‌ ಮಿರ್ಜನ್ನವರ ಅಭಿಪ್ರಾಯ   
Published 7 ಫೆಬ್ರುವರಿ 2024, 15:32 IST
Last Updated 7 ಫೆಬ್ರುವರಿ 2024, 15:32 IST
ಅಕ್ಷರ ಗಾತ್ರ

ಮೂಡಲಗಿ: ಸರ್ಕಾರದಿಂದ ನಡೆಸುವ ಮೊರಾರ್ಜಿ ವಸತಿ ಶಾಲೆಗಳು ಗ್ರಾಮೀಣ ಪ್ರತಿಭಾವಂತ ಮಕ್ಕಳ ಭವಿಷ್ಯ ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಲಿವೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಡಾ.ಅಬ್ದುಲರಶೀದ ಮಿರ್ಜನ್ನವರ ಹೇಳಿದರು.

ಇಲ್ಲಿಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 2023-24ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭದಲ್ಲಿ ಮಾತನಾಡಿದ ಅವರು, ಮೊರಾರ್ಜಿ ವಸತಿ ಶಾಲೆಯ ಸಿಬ್ಬಂದಿಯವರು ವಿದ್ಯಾರ್ಥಿಗಳಿಗೆ ಶಿಕ್ಷಕರು ಆಗಿರುತ್ತಾರೆ ಮತ್ತು ಪಾಲಕರೂ ಆಗಿರುತ್ತಾರೆ ಎಂದರು.

ಮೊರಾರ್ಜಿ ಶಾಲೆಗೆ ಪ್ರವೇಶ ಪಡೆದ ಮಕ್ಕಳು ಎಸ್ಎಸ್ಎಲ್‌ಸಿ ನಂತರ ಶಿಕ್ಷಣ ಮೊಟಕುಗೊಳಿಸಬಾರದು ಎಂದು ಈಗಾಗಲೇ ಪಿಯುಸಿ ಪ್ರಾರಂಭಿಸಲಾಗಿದೆ. ಮುಂದಿನ ಹಂತವಾಗಿ ಸರ್ಕಾರವು ಪದವಿ ಕೋರ್ಸ್‌ಗಳು ಪ್ರಾರಂಭಗೊಳ್ಳಲಿದ್ದು, ಈಗಾಗಲೇ ಚಿಕ್ಕೋಡಿಯಲ್ಲಿ ಪ್ರಾಯೋಗಿಕವಾಗಿ ಪದವಿ ಕೋರ್ಸ್‌ ಪ್ರಾರಂಭಿಸಲಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಪಿಎಸ್ಐ ಎಚ್.ವೈ. ಬಾಲದಂಡಿ, ಸಾಹಿತಿ ಬಾಲಶೇಖರ ಬಂದಿ ಮಾತನಾಡಿದರು. ವಸತಿ ಶಾಲೆಯ ಪ್ರಾಚಾರ್ಯ ಗೋವಿಂದ ಕಳ್ಳಿಮನಿ ಮಾತನಾಡಿದರು.

ಸಾಧಕ ವಿದ್ಯಾರ್ಥಿಗಳು, ದೇಣಿಗೆ ನೀಡಿದ ಮಹಿನೀಯರನ್ನು ಸನ್ಮಾನಿಸಿದರು. ಶಿಕ್ಷಕ ಬಿ.ಎ. ಡಾಂಗೆ, ರಮಜಾನ್ ಶೇಖ, ಬಿಇಒ ಕಚೇರಿಯ ಸತೀಶಕುಮಾರ, ನಿಲಯಪಾಲಕ ಮಲ್ಲಿಕಾರ್ಜುನ ಕೆಂಚಣ್ಣವರ, ವಿಬಿಎಸ್ ಶಾಲೆಯ ಆರ್.ಆರ್. ಮೇಲಗಪ್ಪ, ದೈಹಿಕ ಶಿಕ್ಷಕ ಸಿದ್ದು ದನವಾಡಿ, ರುದ್ರಪ್ಪ ಸಿದ್ದಣ್ಣವರ, ಸೋಮನಾಥ ಇಜೇರಿ, ಜಾಹೀದ ನದಾಫ ಇದ್ದರು. ಸೋಮನಾಥ ಇಜಾರೆ, ರೋಶನ ಚವ್ಹಾನಕರ, ಪಾತಿಮಾ ಅತ್ತಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT