ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಕ್ಕೇರಿ: ಹೊಸ ನ್ಯಾಯಾಲಯ ನಿರ್ಮಾಣಕ್ಕೆ ಮನವಿ

Published 5 ಜುಲೈ 2024, 14:41 IST
Last Updated 5 ಜುಲೈ 2024, 14:41 IST
ಅಕ್ಷರ ಗಾತ್ರ

ಹುಕ್ಕೇರಿ: ಈಗಿರುವ ಸ್ಥಳೀಯ ನ್ಯಾಯಾಲಯ ಕಟ್ಟಡದಲ್ಲಿಯೇ  ನೂತನ ನ್ಯಾಯಾಲಯದ ಕಟ್ಟಡವನ್ನು  ಕಟ್ಟಬೇಕು ಎಂದು ಹನ್ನೊಂದ್ ಜಮಾತ ಅಧ್ಯಕ್ಷರಾ ಸಲೀಮ್ ನದಾಫ್ ನೇತೃತ್ವದಲ್ಲಿ ತಹಶೀಲ್ದಾರರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಈಗಿನ ಕಟ್ಟಡ ಪಟ್ಟಣದ ಮಧ್ಯಭಾಗದಲ್ಲಿದ್ದು, ನ್ಯಾಯಾಲಯಕ್ಕೆ ತಹಶೀಲ್ದಾರ್ ಕಚೇರಿ, ನೋಂದಣಿ ಕಚೇರಿ, ತಾಲ್ಲೂಕು ಪಂಚಾಯ್ತಿ, ಮುಖ್ಯ ಅಂಚೆ ಕಚೇರಿ, ದಾಖಲಾತಿ ಕಚೇರಿ, ಕೆನರಾ ಬ್ಯಾಂಕ್, ಪಿಡಬ್ಲೂಡಿ, ಅರಣ್ಯ ಇಲಾಖೆ, ಸಾರ್ವಜನಿಕ ಆಸ್ಪತ್ರೆ, ಪ್ರವಾಸಿ ಮಂದಿರ, ಪೊಲೀಸ್ ಠಾಣೆ, ಬಸ್ ನಿಲ್ದಾಣ ಸೇರಿದಂತೆ ಶಾಲಾ ಕಾಲೇಜು ಮತ್ತು ಝರಾಕ್ಷ ಅಂಗಡಿಗಳು ಸಮೀಪದಲ್ಲಿವೆ. ಇದರಿಂದ ಜನರಿಗೆ ತುಂಬಾ ಅನುಕೂಲವಿದೆ ಎಂದರು.

 ಗ್ರೇಡ್ 2 ತಹಶೀಲ್ದಾರ್ ಪ್ರಕಾಶ ಕಲ್ಲೋಳಿ ಹಾಗೂ ಪಿಡಬ್ಲೂಡಿ ಎಇ ಪ್ರಭಾಕರ್ ಕಾಮತ ಅವರಿಗೆ ಮನವಿ  ಸಲ್ಲಿಸಿದರು.

ಹನ್ನೊಂದು ಜಮಾತ್ ಅಧ್ಯಕ್ಷ ಸಲೀಮ್ ನದಾಫ್, ನಜೀರ್ ಮೊಮೀನ್ ದಾದಾ, ಸಲಿಂ ಕಳಾವಂತ, ಇರ್ಷಾದ್ ಮೊಕಾಶಿ. ಶಹಜಾನ್ ಬಡಗಾಂವಿ, ಯೂಸುಫ್ ಖಂಡಾಯತ, ಕೇಸರ್ ಮೊಕಾಶಿ, ರಾಜು ನದಾಫ್ ಸೇರಿ ಜಮಾತ್ ಸರ್ವ ಸದಸ್ಯರು ಇದ್ದರು.

ಹುಕ್ಕೇರಿ ನ್ಯಾಯಾಲಯದ ಹೊಸ ಕಟ್ಟಡವನ್ನು ಪಟ್ಟಣದ ಹೊರವಲಯದಲ್ಲಿ ಕಟ್ಟದೆ ಈಗಿರುವ ಜಾಗದಲ್ಲಿ ಕಟ್ಟುವಂತೆ ಹನ್ನೊಂದು ಜಮಾತ್ ಅಧ್ಯಕ್ಷ ಸಲೀಮ್ ನದಾಫ್ ನೇತೃತ್ವದಲ್ಲಿ ಪಿಡಬ್ಳೂಡಿ ಎಇ ಪ್ರಭಾಕರ್ ಕಾಮತ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಹುಕ್ಕೇರಿ ನ್ಯಾಯಾಲಯದ ಹೊಸ ಕಟ್ಟಡವನ್ನು ಪಟ್ಟಣದ ಹೊರವಲಯದಲ್ಲಿ ಕಟ್ಟದೆ ಈಗಿರುವ ಜಾಗದಲ್ಲಿ ಕಟ್ಟುವಂತೆ ಹನ್ನೊಂದು ಜಮಾತ್ ಅಧ್ಯಕ್ಷ ಸಲೀಮ್ ನದಾಫ್ ನೇತೃತ್ವದಲ್ಲಿ ಪಿಡಬ್ಳೂಡಿ ಎಇ ಪ್ರಭಾಕರ್ ಕಾಮತ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT