ಮುನವಳ್ಳಿ: ಸಂಸ್ಕೃತ ವಿಶ್ವವಿದ್ಯಾಲಯ, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು, ಪಟ್ಟಣದ ಶ್ರೀ ಕುಮಾರೇಶ್ವರ ವಿದ್ಯಾಮಂದಿರ ಹಾಗೂ ದಲಿತ ಜಾಗೃತಿ ಸಂಸ್ಕೃತ ಪಾಠಶಾಲೆ ಸಂಯೋಗದಲ್ಲಿ ಅಸ್ಮಾಕಂ ಸಂಸ್ಕೃತಂ ಎಂಬ ಕಾರ್ಯಕ್ರಮ ಶಾಲೆಯಲ್ಲಿ ಈಚೆಗೆ ಜರುಗಿತು.
ಶಾಲೆಯ ಮುಖೋಪಾದ್ಯ ಎಸ್.ಎಚ್.ರಾಠೋಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಲಿತ ಜಾಗೃತಿ ಸಂಸ್ಕೃತ ಪಾಠಶಾಲೆ ಮುಖ್ಯೋಪಾಧ್ಯಾಯ ಎಸ್.ಸಿ.ಜೋಶಿ ಪ್ರಾಸ್ತಾವಿಕ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಎಸ್.ಎಂ.ದಿಕ್ಷಿತ, ಸವದತ್ತಿ ಸಂಸ್ಕೃತ ಪಾಠಶಾಲೆಯ ರೇಣುಕಾ ಹಾಗೂ ಅತಿಥಿಗಳಾಗಿ ಎಂ.ಎಂ.ಲಕ್ಕನ್ನವರ, ಡಿ.ಡಿ.ಶ್ಯಾನಭೋಗ, ಜಿ.ಎನ್.ಅಲಮನ್ನವರ, ಗೋಪಶೆಟ್ಟಿ, ಇತರರು ಇದ್ದರು.
ಶಿಕ್ಷಕರನ್ನು ಸನ್ಮಾನಿಸಲಾಯಿತು. ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಗೋಡಚೆನ್ನವರ ನಿರೂಪಿಸಿದರು. ಶಿಕ್ಷಕ ಬರಮನ್ನವರ ವಂದಿಸಿದರು.